Tuesday, January 27, 2026
Tuesday, January 27, 2026
spot_img

ವಿಶ್ವಕಪ್ ಹೊಸ್ತಿಲಲ್ಲಿ ಟೀಮ್ ಇಂಡಿಯಾಗೆ ಶಾಕ್: ಆಲ್-ರೌಂಡರ್ ಕೋಟಾದಲ್ಲಿ ಮಹತ್ವದ ಬದಲಾವಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 7 ರಿಂದ ಕ್ರಿಕೆಟ್ ಲೋಕದ ದೊಡ್ಡ ಯುದ್ಧ ಶುರುವಾಗಲಿದ್ದು, ವಿಶ್ವದ ಬಲಿಷ್ಠ ತಂಡಗಳು ಕಣಕ್ಕಿಳಿಯಲು ಸಜ್ಜಾಗಿವೆ. ಆದರೆ, ಈ ಹೊತ್ತಲ್ಲೇ ಟೀಮ್ ಇಂಡಿಯಾ ಪಾಳಯದಲ್ಲಿ ಆತಂಕದ ಸುದ್ದಿಯೊಂದು ಹರಿದಾಡುತ್ತಿದೆ. ಸ್ಟಾರ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಇತ್ತೀಚೆಗೆ ನಡೆದ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ಸುಂದರ್ ಎಡ ಪೆಕ್ಕೆಲುಬಿನ ಗಾಯಕ್ಕೆ ತುತ್ತಾಗಿದ್ದರು. ಇದೇ ಕಾರಣಕ್ಕೆ ಅವರು ಕಿವಿಗಳ ವಿರುದ್ಧದ ಟಿ20 ಸರಣಿಯಿಂದಲೂ ದೂರ ಉಳಿದಿದ್ದರು. ವಿಶ್ವಕಪ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದರೂ, ಅವರು ಪೂರ್ಣ ಪ್ರಮಾಣದಲ್ಲಿ ಫಿಟ್ ಆಗಿರುವ ಬಗ್ಗೆ ವೈದ್ಯಕೀಯ ವರದಿ ಲಭ್ಯವಾಗಿಲ್ಲ. ಹೀಗಾಗಿ ಆಯ್ಕೆ ಸಮಿತಿಯು ಪರ್ಯಾಯ ಆಟಗಾರನ ಹುಡುಕಾಟದಲ್ಲಿದೆ.

ವಾಷಿಂಗ್ಟನ್ ಸುಂದರ್ ಅಲಭ್ಯರಾದರೆ ಅವರ ಸ್ಥಾನಕ್ಕೆ ಪ್ರಮುಖವಾಗಿ ಇಬ್ಬರ ಹೆಸರುಗಳು ಕೇಳಿಬರುತ್ತಿವೆ:

ತಂಡಕ್ಕೆ ಒಬ್ಬ ಆಲ್ ರೌಂಡರ್ ಅವಶ್ಯಕತೆ ಇದೆ ಎಂದು ಮ್ಯಾನೇಜ್‌ಮೆಂಟ್ ನಿರ್ಧರಿಸಿದರೆ, ಇತ್ತೀಚಿನ ಫಾರ್ಮ್‌ನಲ್ಲಿರುವ ರಿಯಾನ್ ಪರಾಗ್ ಅವರಿಗೆ ಅವಕಾಶ ಸಿಗುವುದು ಬಹುತೇಕ ಖಚಿತ.

ಸ್ಪಿನ್ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ತುಂಬಲು ಮುಖ್ಯ ಸ್ಪಿನ್ನರ್ ಬೇಕೆಂದಾದರೆ ರವಿ ಬಿಷ್ಣೋಯ್ ಅವರಿಗೆ ಅದೃಷ್ಟ ಒಲಿಯಬಹುದು.

ಸದ್ಯದ ಟೀಮ್ ಇಂಡಿಯಾ ಸ್ಕ್ವಾಡ್:

ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್ ಹಾಗೂ ವಾಷಿಂಗ್ಟನ್ ಸುಂದರ್ (ಲಭ್ಯತೆ ಅನುಮಾನ).

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !