Tuesday, January 27, 2026
Tuesday, January 27, 2026
spot_img

VIRAL | ಆಸ್ಪತ್ರೆ ಲಿಫ್ಟ್‌ ಕೂಡ ಸೇಫ್‌ ಇಲ್ಲದಂತಾಯ್ತು! ಮಹಿಳೆಯ ಸರಗಳ್ಳತನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭೋಪಾಲ್‌ನ ಏಮ್ಸ್‌ ಆಸ್ಪತ್ರೆಯ ಲಿಫ್ಟ್‌ನಲ್ಲಿ ಮಹಿಳೆಯ ಸರ ಕಳ್ಳತನವಾಗಿದೆ.

ಈ ಬಗ್ಗೆ ಸಿಸಿಟಿವಿಯಲ್ಲಿ ದೃಶ್ಯ ವೈರಲ್​​ ಆಗಿದೆ. ಆಸ್ಪತ್ರೆಯ ಲಿಫ್ಟ್ನಲ್ಲಿ ಮಹಿಳಾ ಉದ್ಯೋಗಿಯ ಸರಗಳ್ಳತನ ನಡೆದಿದೆ. ಆಸ್ಪತ್ರೆಯ ಮಹಿಳಾ ಉದ್ಯೋಗಿಯೊಬ್ಬರು ಕೆಲಸದ ನಿಮಿತ್ತ ಲಿಫ್ಟ್‌ನಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಲಿಫ್ಟ್ ಒಳಗೆ ಮಹಿಳೆ ಒಬ್ಬರೇ ಇದ್ದದ್ದನ್ನು ಗಮನಿಸಿದ ದುಷ್ಕರ್ಮಿ, ಲಿಫ್ಟ್ ಚಲಿಸುತ್ತಿರುವಾಗಲೇ ಅವರ ಕತ್ತಿನಲ್ಲಿದ್ದ ಸರವನ್ನು ಬಲವಂತವಾಗಿ ಕಿತ್ತುಕೊಂಡಿದ್ದಾನೆ. ಲಿಫ್ಟ್ ಬಾಗಿಲು ತೆರೆಯುತ್ತಿದ್ದಂತೆಯೇ ಆತ ಅಲ್ಲಿಂದ ಪರಾರಿಯಾಗಿದ್ದಾನೆ.

ಆಸ್ಪತ್ರೆಯ ಲಿಫ್ಟ್‌ಗಳಲ್ಲಿ ಸಾಮಾನ್ಯವಾಗಿ ಸಿಸಿಟಿವಿ ಕ್ಯಾಮೆರಾಗಳು ಇರುತ್ತವೆ. ಇಷ್ಟಿದ್ದರೂ ದುಷ್ಕರ್ಮಿಗೆ ಭಯವಿಲ್ಲದೆ ಕೃತ್ಯ ಎಸಗಿರುವುದು ಭದ್ರತಾ ಸಿಬ್ಬಂದಿಯ ವೈಫಲ್ಯ ಎಂದು ಸಿಬ್ಬಂದಿ ವರ್ಗ ಆಕ್ರೋಶ ವ್ಯಕ್ತಪಡಿಸಿದೆ.

ಈ ಘಟನೆಯ ನಂತರ ಏಮ್ಸ್ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿ ಆಸ್ಪತ್ರೆಯ ಆವರಣದಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಮಹಿಳಾ ಸಿಬ್ಬಂದಿಗೆ ಕೆಲಸದ ಸ್ಥಳದಲ್ಲಿ ರಕ್ಷಣೆ ಇಲ್ಲದಿದ್ದರೆ ಕೆಲಸ ಮಾಡುವುದು ಕಷ್ಟ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !