ಹೊಸದಿಗಂತ ವರದಿ ಕಲಬುರಗಿ:
ತತ್ವ ಪ್ರಪಂಚಕ್ಕೆ ಶ್ರೀಮಧ್ವಾಚಾರ್ಯರ ಕೊಡುಗೆ ಅನನ್ಯವಾಗಿದೆ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು.
ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಉತ್ತರಾದಿ ಮಠದಲ್ಲಿ ಸುಮಧ್ವೀಜಯ ಪಾರಾಯಣ ಸಮರ್ಪಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗುರುಗಳಲ್ಲಿ ಭಕ್ತಿ ಮಾಡಿದರೆ ಮುಕ್ಕುಂದನ ಮೇಲೆ ಭಕ್ತಿ ಬರುತ್ತದೆ.ಭಗವಂತನನ್ನು ಭಜಿಸಿದರೆ ಮೋಕ್ಷದ ಫಲ ಸಿಗುತ್ತದೆ.ಮೋಕ್ಷವನ್ನು ಭಗವಂತ ಕೊಡುತ್ತಾನೆ.ಆದರೆ, ಭಗವಂತನ ಕಡೆ ನಮ್ಮನ್ನು ಕರೆದುಕೊಂಡು ಹೋಗುವ ಶಕ್ತಿ ಗುರುಗಳಲ್ಲಿದೆ ಎಂದರು.
ಸಹಸ್ರಾರು ಭಕ್ತರು ಲಕ್ಷ ಸಲ ಸುಮಧ್ವೀಜಯ ಪಾರಾಯಣ ಮಾಡಿ ಮಳಖೇಡದ ಇಂದ್ರನ ಸನ್ನಿಧಾನದಲ್ಲಿ ಸಮರ್ಪಣೆ ಮಾಡಿದ್ದು ಪುಣ್ಯದ ಕಾರ್ಯ.ಇಂಥ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು.ಜೀವತ್ತೋಮರಾದ ವಾಯು ದೇವರನ್ನು ಪರಿಪೂರ್ಣ ತಿಳಿದುಕೊಳ್ಳುವುದು ಸುಲಭದ ಮಾತಲ್ಲ.
ಮಧ್ವಾಚಾರ್ಯರರು ಭಗವಂತನ ಆಜ್ಞಾನುಸಾರ ಭೂಲೋಕದಲ್ಲಿ ಅವತರಿಸಿ ಸತ್ ಸಿದ್ಧಾಂತವನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ಶ್ರೀಗಳು ನುಡಿದರು.



