ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೀರಾ ಮಾಧವ, ರಾಧಾ ರಮಣ ಧಾರಾವಾಹಿ ನಟಿ ಕಾವ್ಯಾ ಗೌಡ ಹಾಗೂ ಅವರ ಪತಿ ಸೋಮಶೇಖರ್ ಮೇಲೆ ಸಂಬಂಧಿಕರು ಹಲ್ಲೆ ಮಾಡಿದ್ದಾರೆ ಎಂಬ ಆರೋಪದಡಿಯಲ್ಲಿ ದೂರು ದಾಖಲಾಗಿದೆ.
ಇತ್ತ ಕಳ್ಳಿ ಎಂದ ಅತ್ತಿಗೆ ಪ್ರೇಮಾ ಮಾತಿಗೆ ಪ್ರತಿಕ್ರಿಯೆ ನೀಡಿದ ಕಾವ್ಯಾ ಗೌಡ ,ನನ್ನ ಪತಿ ಹಾಗೂ ಮಾವನ ಅಕೌಂಟ್‌ನಿಂದ ನನಗೆ ಒಂದು ರೂಪಾಯಿ ಕೂಡ ಬಂದಿಲ್ಲ. ನಾನು ಚಿತ್ರರಂಗಕ್ಕೆ ಬಂದು ಹದಿನೆಂಟು ವರ್ಷ ಆಗಿದೆ. ನಾನು ಎಲ್ಲೇ ಹೋದರೂ, ನನ್ನ ಹಣದಿಂದಲೇ ಖರ್ಚು ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಚಿತ್ರರಂಗದಲ್ಲಿದ್ದೇನೆ, ಸ್ವಲ್ಪ ಹೆಸರು ಮಾಡಿದ್ದೇನೆ, ಇದನ್ನು ಸಹಿಸಲು ಆಗದೆ ಈ ರೀತಿ ಮಾಡಿದ್ದಾರೆ. ನಾನು ಮಧ್ಯಮ ವರ್ಗದಿಂದ ಬಂದವಳು. ನನ್ನ ಮಗಳನ್ನು ನೋಡಿಕೊಳ್ಳಲು ಸುಮಾ ಎನ್ನುವ ಹುಡುಗಿ ಇದ್ದಳು. ಅವಳ ಮೇಲೆ ಕೂಡ ಕಳ್ಳಿ ಎಂದು ಆರೋಪ ಮಾಡಿದ್ದರು. ಇದನ್ನು ನನ್ನ ಮಾವ ಇತ್ಯರ್ಥ ಮಾಡಿದ್ದರೂ ಕೂಡ ಬಗೆಹರಿದಿಲ್ಲ ಎಂದು ಹೇಳಿದ್ದಾರೆ.
ನಮ್ಮ ಮನೆಯಲ್ಲಿ ಎಲ್ಲ ಕಡೆ ಸಿಸಿಟಿವಿ ಕ್ಯಾಮರಾ ಇದೆ, ಚೆಕ್ ಮಾಡಿಯೇ ಎಲ್ಲರನ್ನು ಬಿಡುತ್ತಾರೆ. ಲಿವಿಂಗ್ ಏರಿಯಾದಲ್ಲಿ ಇಟ್ಟಿದ್ದ ಆಭರಣ ಕಳುವು ಆಗಿದೆಯಂತೆ. ಲಿವಿಂಗ್ ಏರಿಯಾದಲ್ಲಿ ಯಾರು ಆಭರಣ ಇಡುತ್ತಾರೆ? ಎಂದು ಕಾವ್ಯಾ ಗೌಡ ಹೇಳಿದ್ದಾರೆ.



