ಹೊಸದಿಗಂತ ವರದಿ ಹುಬ್ಬಳ್ಳಿ:
ನಕಲಿ ಗಾಂಧಿಗಳ ಬೆಳೆಸುವಲ್ಲಿ ತಲ್ಲೀನರಾಗಿದ್ದ ಕಾಂಗ್ರೆಸ್ ನಾಯಕರಿಗೆ ಬಹುಶಃ ಈಗ ಮಹಾತ್ಮ ಗಾಂಧಿ ಹೆಸರು ನೆನಪಾಗಿದೆ ಅನ್ನಿಸುತ್ತಿದೆ. 415 ವಿವಿಧ ಯೋಜನೆ, ವಿಮಾನ ನಿಲ್ದಾಣ, ಉದ್ಯಾನವನಗಳಿಗೆ ನಕಲಿ ಗಾಂಧಿ ಹೆಸರಿಟ್ಟರುವ ಇವರು, ಮಹಾತ್ಮ ಗಾಂಧಿಯನ್ನು ಕಡೆಗಣಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.
ದೇಶದಲ್ಲಿ ಎಲ್ಲ ಕಡೆ ಸೋಲುತ್ತಿರುವ ಕಾಂಗ್ರೆಸ್‌ಗೆ ಈಗ ಬುದ್ಧಿ ಬಂದಿದೆ. ಕಾಂಗ್ರೆಸ್‌ಗೆ ಕೇಂದ್ರ ಸರ್ಕಾರ ವಿರುದ್ಧ ಹೋರಾಟ ಮಾಡುವ ಯೋಗ್ಯತೆ ಇಲ್ಲ. ಸಂವಿಧಾನ ಬಗ್ಗೆ ಮಾತನಾಡುವ ಅಧಿಕಾರವು ಇಲ್ಲ. ವಿಬಿ-ಜಿ ರಾಮ್ ಜಿ ಯೋಜನೆ ತಿದ್ದುಪಡಿಯ ಉದ್ದೇಶ ಭಷ್ಟಚಾರ ತಡೆಯಲು, ಪಾರದರ್ಶಕವಾಗಿ ಮಾಡಿರುವುದರಿಂದ ಕಾಂಗ್ರೆಸ್‌ಗೆ ಅಸಮಾಧಾನವಾಗಿದೆ ಎಂದರು.
2040 ವಿಕಸಿತ ಭಾರತ ಉದ್ದೇಶವಿಟ್ಟುಕೊಂಡು ವಿಬಿ ಜಿ ರಾಮ್ ಜಿ ಯೋಜನೆಯಡಿ ಮೂಲ ಸೌಕರ್ಯ ಒದಗಿಸುವ ಕಾರ್ಯ ಕೇಂದ್ರ ಸರ್ಕಾರ ಮಾಡಿದೆ. ಭ್ರಷ್ಟಾಚಾರ ಹಾಗೂ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ನಾಯಕರು ವಿರೋಧ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹಾಗೂ ರಾಹುಲ್ ಗಾಂಧಿ ಮೆಚ್ಚಿಸಲು ರಾಜ್ಯಪಾಲರಿಗೆ ಅವಮಾನ ಮಾಡಿದ್ದಾರೆ. ಇತಿಹಾಸ ಹೊಂದಿದ ಪಕ್ಷಕ್ಕೆ ರಾಜ್ಯಪಾಲರ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಎಂಬುವುದು ಗೊತ್ತಿಲ್ಲ. ದಲಿತರ ಬಗ್ಗೆ ಮಾತನಾಡುವ ಸಿಎಂ, ದಲಿತ ರಾಜ್ಯಪಾಲರ ಬಗ್ಗೆ ಮಾತನಾಡಿರುವುದು ಖಂಡನೀಯ.
163 ನೇ ಕಲಂ ಪ್ರಕಾರ ರಾಜ್ಯಪಾಲರು ಏನು ಮಾಡುಬೇಕು ಎಂಬುವುದು ಅವರ ವಿವೇಚನಾ ಅಧಿಕಾರ ಹೊಂದಿದ್ದಾರೆ. ರಾಹುಲ್ ಗಾಂಧಿ ಮೆಚ್ಚಿಸಲು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಬಗ್ಗೆ ಕೆಟ್ಟ ಪದಗಳ ಭಾಷಣ ಮಾಡಲು ಹೇಳಿದ್ದಾರೆ. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪರವಾಗಿದ್ದಾರೆ. ಸಿದ್ದರಾಮಯ್ಯ ಪರವಿರುವ ರಾಹುಲ್ ಗಾಂಧಿಯೂ ಶಿವಕುಮಾರ ಅವರಿಗೆ ಸಹಕಾರ ನೀಡಿದರೇ ಸಿಎಂ ಸ್ಥಾನ ಹೋಗಲಿದೆ ಎಂದು ಗ್ಯಾಂಗ್ ಕಟ್ಟಿಕೊಂಡು ಕ್ಷುಲ್ಲಕ ಹಾಗೂ ಚಿಲ್ಲರೆ ಮಟ್ಟಕ್ಕೆ ಸಿಎಂ ಇಳಿದಿದ್ದಾರೆ ಎಂದು ಆರೋಪಿಸಿದರು.



