Tuesday, January 27, 2026
Tuesday, January 27, 2026
spot_img

ಸಮವಸ್ತ್ರದಲ್ಲೇ ಪತ್ನಿ ಜೊತೆ ರೀಲ್‌ ಮಾಡಿದ ಪೊಲೀಸ್: ಉನ್ನತ ಅಧಿಕಾರಿಗಳಿಂದ ತನಿಖೆಗೆ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾರ್ಖಂಡ್‌ನ ಪಲಮುವಿನ ಹುಸೇನಾಬಾದ್ ಪೊಲೀಸ್ ಠಾಣೆಯ ಆವರಣದಲ್ಲಿ ಪತ್ನಿಯೊಂದಿಗೆ ಅಧಿಕಾರಿಯು ಸಮವಸ್ತ್ರದಲ್ಲೇ ಚಿತ್ರೀಕರಿಸಲಾದ ರೊಮ್ಯಾಂಟಿಕ್ ರೀಲ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಸಮಗ್ರ ತನಿಖೆಗೆ ಆದೇಶಿಸಲಾಗಿದೆ.

ಹುಸೇನಾಬಾದ್ ಎಸ್‌ಡಿಪಿಒ ಮೊಹಮ್ಮದ್ ಯಾಕೂಬ್ ಅವರು, ಈ ರೀಲ್ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

ಗಣರಾಜ್ಯೋತ್ಸವದ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ಸೋನು ಚೌಧರಿ ಅವರು ತಮ್ಮ ಪತ್ನಿಯೊಂದಿಗೆ ಸಮವಸ್ತ್ರದಲ್ಲಿ ನೃತ್ಯ ಮಾಡಿದ್ದು , ಈ ವಿಷಯ ಹಿರಿಯ ಅಧಿಕಾರಿಗಳಿಗೆ ತಲುಪಿದ ನಂತರ, ತಕ್ಷಣ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

ಸಮವಸ್ತ್ರ ಮತ್ತು ಸರ್ಕಾರಿ ಆವರಣದ ಬಳಕೆಗೆ ಸಂಬಂಧಿಸಿದ ಯಾವುದೇ ನಿಯಮಗಳ ಉಲ್ಲಂಘನೆಯಾಗಿದೆಯೇ ಎಂದು ತನಿಖೆ ಮಾಡಲಾಗುತ್ತಿದೆ. ಇನ್ಸ್‌ಪೆಕ್ಟರ್ ತಪ್ಪಿತಸ್ಥರೆಂದು ಸಾಬೀತಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಲಮು ಎಸ್ಪಿ ರೀಷ್ಮಾ ರಮೇಶನ್ ಅವರು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !