ಹೊಸದಿಗಂತ ಡಿಜಿಟಲ್ ಡೆಸ್ಕ್:
UGC ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಉತ್ತೇಜಿಸುವ ನಿಯಮ 2026ರನ್ನು ಜಾರಿಗೆ ತಂದಿದೆ. ಆದ್ರೆ ಈ ವಿಚಾರವಾಗಿ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಈ ನಿಯಮ ತಾರತಮ್ಯಕ್ಕೆ ಕಾರಣವಾಗುವುದಿಲ್ಲ ಮತ್ತು ಯಾರೂ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.
ನಿಯಮಗಳ ಉದ್ದೇಶವು ರಕ್ಷಣಾತ್ಮಕವಾಗಿದೆ. ಶಿಕ್ಷಣ ಸಚಿವಾಲಯವು ಕಳವಳಗಳನ್ನು ಪರಿಹರಿಸಲು ಮತ್ತು ತಪ್ಪು ಮಾಹಿತಿಯನ್ನು ನಿವಾರಣೆ ಮಾಡಲು ಮತ್ತಷ್ಟು ಸ್ಪಷ್ಟೀಕರಣಗಳನ್ನು ನೀಡಬಹುದು ಎಂದು ಸರ್ಕಾರಿ ಮೂಲಗಳು ಸೂಚಿಸಿವೆ.
ದೆಹಲಿಯಲ್ಲಿ ಪ್ರತಿಭಟನೆ:
ರಾಷ್ಟ್ರ ರಾಜಧಾನಿಯಲ್ಲಿ ಸವರ್ಣ ಸೇನೆಯ ಸದಸ್ಯರು ಐಟಿಒದಲ್ಲಿರುವ ಯುಜಿಸಿ ಪ್ರಧಾನ ಕಚೇರಿಯ ಹೊರಗೆ ಹೊಸ ನಿಯಮಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಘೇರಾವ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಯಿತು ಮತ್ತು ಯುಜಿಸಿ ಕಚೇರಿಯ ಸುತ್ತಲೂ ಹಲವಾರು ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು.



