Wednesday, January 28, 2026
Wednesday, January 28, 2026
spot_img

ಭಾರತದಲ್ಲಿ ನಿಫಾ ವೈರಸ್ ಆತಂಕ: ಎರಡು ರಾಜ್ಯಗಳಲ್ಲಿ ಎಂಡೆಮಿಕ್ ಝೋನ್ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತಕ್ಕೆ ನಿಫಾ ವೈರಸ್ ಕಾಡುತ್ತಿದ್ದು, ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ನಿಫಾ ವೈರಸ್ ಪ್ರಕರಣ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ ಈ ಎರಡು ರಾಜ್ಯಗಳನ್ನು ಎಂಡೆಮಿಕ್ ಝೋನ್ ಎಂದು ಘೋಷಿಸಲಾಗಿದೆ.

ಏಷ್ಯಾದ ಹಲವು ದೇಶಗಳಲ್ಲಿ ನಿಫಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಆರಂಭಗೊಂಡಿದೆ.

ನಿಫಾ ವೈರಸ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಟ್ಟು ನಿಟ್ಟಿನ ಕ್ರಮಗಳು ಜಾರಿಗೊಂಡಿದೆ. ಎರಡು ರಾಜ್ಯದ ಸರ್ಕಾರಗಳು ಆರೋಗ್ಯ ಕೇಂದ್ರಗಳಿಗೆ ಮಾರ್ಗಸೂಚಿ ನೀಡಿದೆ. ನಿಫಾ ವೈರಸ್ ಸೋಂಕಿತರ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲು ಸೂಚಿಸಲಾಗಿದೆ. ಭಾರತದಲ್ಲಿ ಈಗಾಗಲೇ 110 ಮಂದಿ ಕ್ವಾರಂಟೈನ್ ಮಾಡಲಾಗಿದೆ. 200ಕ್ಕೂ ಹೆಚ್ಚು ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ.

ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಈ ವೈರಸನ್ನು ಝೋನೋಟಿಕ್ ವೈರಸ್ ಎಂದು ಕರೆಯುತ್ತಾರೆ. ವೈರಸ್ ಸೋಂಕಿತರ ಸಾವಿನ ಸಾಧ್ಯತೆ ಶೇಕಡಾ 40 ರಿಂದ ಶೇಕಡಾ 70 ರಷ್ಟಿದೆ. ಕೊರೋನಾ ಹರಡುವಿಕೆ ಪ್ರಮಾಣ ಅತ್ಯಂತ ವೇಗವಾಗಿದೆ. ಕೊರೋನಾಗೆ ಈಗಾಗಲೇ ಲಸಿಕೆ ಇದೆ. ಆದರೆ ನಿಫಾ ವೈರಸ್‌ಗೆ ಲಸಿಕೆಗಳಿಲ್ಲ. ರೋಗನಿರೋಧ ಲಸಿಕೆಗಳು ಕಾರ್ಯನಿರ್ವಹಿಸುವುದಿಲ್ಲ. ಸೀಮಿತ ಔಷಧಿಗಳಿಂದಲೇ ಗುಣಮುಖರಾಗಬೇಕು. ಹೀಗಾಗಿ ಅತೀವ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ವೈದ್ಯರು ಸೂಚಿಸಿದ್ದಾರೆ.

ನಿಫಾ ವೈರಸ್ ಹರಡುವುದು ಹೇಗೆ?
ಬಾವಲಿ ಹಾಗೂ ಹಂದಿಯಿಂದ ನಿಫಾ ವೈರಸ್ ಹೆಚ್ಚಾಗಿ ಹರಡುತ್ತದೆ. ಬಾವಲಿಗಳು ಕಚ್ಚಿದ ಹಣ್ಣುಗಳು, ತರಕಾರಿಗಳು ತಿನ್ನುವದರಿಂದ, ಈ ಪ್ರಾಣಿಗಳ ಹತ್ತಿರ ಸಂಪರ್ಕಗಳಿಂದ ನಿಫಾ ವೈರಸ್ ಹರಡುತ್ತದೆ. ಹೀಗಾಗಿ ಹಣ್ಣು, ತರಕಾರಿ ಹಾಗೂ ಮಾಂಸಗಳ ತಿನ್ನುವಾಗ ಅತೀವ ಮುಂಜಾಗ್ರತೆ ವಹಿಸುವುದು ಅತ್ಯಗತ್ಯ

ನಿಫಾ ವೈರಸ್ ಸೋಂಕಿತರಲ್ಲಿ ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳಲಿದೆ. ಜ್ವರದ ಜೊತೆಗೆ ತಲೆನೋವು, ವಾಂತಿ ಲಕ್ಷಣಗಳು ಕಾಣಿಸಿಕೊಳ್ಳಲಿದೆ. ಇದೇ ವೇಳೆ ನ್ಯೂಮೋನಿಯಾ ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಉಸಿರಾಟದ ಸಮಸ್ಯೆ, ಮೆದಳು ಇನ್‌ಫೆಕ್ಷನ್ ಸೇರಿದಂತೆ ಇತರ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !