January19, 2026
Monday, January 19, 2026
spot_img

ನಮ್ಮದು 40 ವರ್ಷದ ಸ್ನೇಹ: ರಾಧಾಕೃಷ್ಣನ್ ಜೊತೆಗಿನ ಗೆಳತನ ಮೆಲುಕು ಹಾಕಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಎನ್​ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿರುವ ಮಹಾರಾಷ್ಟ್ರದ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ಮೋದಿ ಅವರು ಸಾಥ್ ನೀಡಿದರು.

ಬಳಿಕ ಪ್ರಧಾನಿ ನರೇಂದ್ರ ಮೋದಿಯ ಅವರು,ಸಿಪಿ ರಾಧಾಕೃಷ್ಣನ್ ಅವರ ಜೊತೆಗಿನ ಸ್ನೇಹವನ್ನು ತಿಳಿಸಿದ್ದು, ‘ನಾವು 40 ವರ್ಷಗಳಿಗೂ ಹೆಚ್ಚು ಕಾಲದಿಂದ ಸ್ನೇಹಿತರಾಗಿದ್ದೇವೆ. ಆಗ ನನ್ನ ಕೂದಲೂ ಕಪ್ಪಾಗಿತ್ತು, ರಾಧಾಕೃಷ್ಣನ್ ಅವರ ತಲೆಯಲ್ಲೂ ಕೂದಲಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂಸತ್ತಿನ ಆವರಣದಲ್ಲಿ ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ತಮಾಷೆಯಾಗಿ ತಮ್ಮಿಬ್ಬರ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.

ರಾಧಾಕೃಷ್ಣನ್ ಅವರಿಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇರಬಹುದು, ಆದರೆ ಅವರು ರಾಜಕೀಯದಲ್ಲಿ ಎಂದಿಗೂ ಆಟವಾಡಲಿಲ್ಲಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://x.com/narendramodi/status/1958086370804511002/photo/2

ಇಂದು ನಾಮಪತ್ರ ಸಲ್ಲಿಸಿದ ಬಳಿಕವೂ ಎಕ್ಸ್​ ಪೋಸ್ಟ್​ನಲ್ಲಿ ರಾಧಾಕೃಷ್ಣನ್ ಅವರ ಬಗ್ಗೆ ಬರೆದಿರುವ ಪ್ರಧಾನಿ ಮೋದಿ, ‘ಭಾರತದ ಉಪರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸುವಾಗ ತಿರು ಸಿಪಿ ರಾಧಾಕೃಷ್ಣನ್ ಅವರೊಂದಿಗೆ ನಾನು, ಸಚಿವರು, ಪಕ್ಷದ ಸಹೋದ್ಯೋಗಿಗಳು ಮತ್ತು ಎನ್‌ಡಿಎ ನಾಯಕರು ಇದ್ದೆವು. ಅವರು ಅತ್ಯುತ್ತಮ ಉಪರಾಷ್ಟ್ರಪತಿಯಾಗುತ್ತಾರೆ ಮತ್ತು ರಾಷ್ಟ್ರೀಯ ಪ್ರಗತಿಯತ್ತ ನಮ್ಮ ಪ್ರಯಾಣವನ್ನು ಉತ್ಕೃಷ್ಟಗೊಳಿಸುತ್ತಾರೆ ಎಂಬ ವಿಶ್ವಾಸ ಎನ್‌ಡಿಎ ಕುಟುಂಬಕ್ಕಿದೆ’ ಎಂದು ‘ಎಕ್ಸ್’ನಲ್ಲಿ ಬರೆದಿದ್ದಾರೆ.

Must Read