ನಮ್ಮಲ್ಲಿ ಹೆಚ್ಚಿನವರಿಗೆ ಒಂದು ಅಭ್ಯಾಸವಿದೆ. ಯಾವುದಾದರೂ ಹೊಸ ಕೆಲಸಕ್ಕೆ ಕೈ ಹಾಕುತ್ತೇವೆ, ಅದು ಅಂದುಕೊಂಡಂತೆ ನಡೆಯದಿದ್ದರೆ ಸಾಕು, “ಇದು ನಮಗೆ ಸೆಟ್ ಆಗಲ್ಲ” ಎಂದು ಅಲ್ಲಿಗೇ ಬಿಟ್ಟುಬಿಡುತ್ತೇವೆ. ಯಾವುದೇ ಕೆಲಸವನ್ನು ಒಮ್ಮೆ ಮಾಡಿದಾಗ ಅದು ಯಶಸ್ವಿಯಾಗದಿದ್ದರೆ, ತಕ್ಷಣ ಆ ಪ್ರಯತ್ನವನ್ನು ಕೈಬಿಡುವುದು. “ನನ್ನಿಂದ ಇದು ಸಾಧ್ಯವಿಲ್ಲ” ಎಂದು ನಿರ್ಧರಿಸಿ ಅರ್ಧಕ್ಕೇ ನಿಲ್ಲಿಸುವ ಈ ಅಭ್ಯಾಸವು ವ್ಯಕ್ತಿಯ ಬೆಳವಣಿಗೆಗೆ ಮಾರಕವಾಗುತ್ತಿದೆ.
ಸೋಲನ್ನು ಮೆಟ್ಟಿ ನಿಲ್ಲುವ ಬದಲು ಅಲ್ಲಿಗೇ ಬಿಟ್ಟುಬಿಡುವ ಈ ಪ್ರವೃತ್ತಿ ಈಗಿನ ಜನರ ದೊಡ್ಡ ದೌರ್ಬಲ್ಯವಾಗಿದೆ.
ಪ್ರಯತ್ನ ಮತ್ತು ನಿರಂತರತೆ ಯಶಸ್ಸಿನ ಮೂಲಮಂತ್ರ. ಆದರೆ ಒಂದು ಸಣ್ಣ ವಿಘ್ನ ಎದುರಾದ ಕೂಡಲೇ ಇಡೀ ಯೋಜನೆಯನ್ನೇ ಕೈಬಿಡುವ ಮನಸ್ಥಿತಿ ಸಮಾಜದಲ್ಲಿ ಬೆಳೆಯುತ್ತಿದೆ. ಈ ‘Quit’ ಮಾಡುವ ಅಭ್ಯಾಸವು ಆತ್ಮವಿಶ್ವಾಸದ ಕೊರತೆಯನ್ನು ಎತ್ತಿ ತೋರಿಸುತ್ತದೆ. ಸೋಲನ್ನು ಅನುಭವವಾಗಿ ಸ್ವೀಕರಿಸದೆ, ಅದನ್ನು ಕೊನೆಯೆಂದು ಭಾವಿಸುವವರ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ.
ಚಿಕ್ಕ ಕಿವಿಮಾತು.. ಗೆದ್ದವರೆಲ್ಲರೂ ಮೊದಲ ಪ್ರಯತ್ನದಲ್ಲೇ ಗೆದ್ದವರಲ್ಲ, ಬದಲಿಗೆ ಅರ್ಧಕ್ಕೆ ಬಿಡದೆ ಮುಂದುವರಿದವರು ಎಂಬುದು ನೆನಪಿರಲಿ.



