Wednesday, January 28, 2026
Wednesday, January 28, 2026
spot_img

ಸಾವಿನಲ್ಲೂ ಜತೆಯಾದ ಸಹೋದರರು, ಅಣ್ಣನ ಅಂತ್ಯಕ್ರಿಯೆ ನಂತರ ತಮ್ಮ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಣ್ಣನ ಸಾವಿನ ನೋವಿನಲ್ಲಿದ್ದ ತಮ್ಮ ಕೂಡ ಸಾವಿಗೀಡಾಗಿರುವ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ನಡೆದಿದೆ. ಆ ಮೂಲಕ ಸಹೋದರರಿಬ್ಬರು ಸಾವಿನಲ್ಲೂ ಒಂದಾಗಿದ್ದಾರೆ.

ಜನವರಿ 26ರಂದು ಬಸವಂತರಾಯ ಸಣ್ಣಕ್ (81) ಮೃತಪಟ್ಟಿದ್ದರು. ಅಣ್ಣನ ಅಂತ್ಯಕ್ರಿಯೆ ಮುಗಿದ ಮರುದಿನವೇ ತಮ್ಮ ತಮ್ಮನಾದ ಶಿವರಾಯ್ ಸಣ್ಣಕ್ (79) ಕೊಲೆಯುಸಿರೆಳೆದಿದ್ದಾರೆ.

ಅಣ್ಣನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿ ಮನೆಗೆ ಬಂದು ಶಿವರಾಯ್ ಹಾಸಿಗೆ ಹಿಡಿದಿದ್ದರು. ಸಹೋದರನ ಅಗಲಿಕೆಯಿಂದ ಆಘಾತಕ್ಕೆ ಒಳಗಾಗಿದ್ದರು. ಆ ನೋವಿನಲ್ಲೇ ತಮ್ಮನೂ ಇಹಲೋಕ ತ್ಯಜಿಸಿದ್ದಾರೆ.

ಬಡದಾಳ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಸಹೋದರರ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಅಣ್ಣ-ತಮ್ಮರ ಬಾಂಧವ್ಯವನ್ನು ನೆನೆದು ಮರುಕ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !