Wednesday, January 28, 2026
Wednesday, January 28, 2026
spot_img

VIRAL | 10 ಕೋಟಿ ರುಪಾಯಿ ಕಾರಿಗೆ 10 ರೂಪಾಯಿ ನಿಂಬೆಹಣ್ಣೇ ಸೇಫ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎಷ್ಟು ಕೋಟಿ ಕಾರಾದ್ರೂ ಆಗಿರಲಿ ಸೇಫ್ಟಿ ಮುಖ್ಯ, ನಾವು ಹೇಳ್ತಿರೋದು ಇನ್ಶೂರೆನ್ಸ್‌, ಕಾರ್‌ ಸೇಫ್ಟಿ ಬಗ್ಗೆ ಅಲ್ಲ. ನಮ್ಮ ಟ್ರಡಿಷನಲ್‌ ಸೇಫ್ಟಿ! ಹೌದು, ಹತ್ತು ಕೋಟಿ ರೂಪಾಯಿಯ ಕಾರ್‌ಗೆ ಹತ್ತು ರೂಪಾಯಿಯ ನಿಂಬೆಹಣ್ಣು ಹಾಗೂ ಒಂದು ಮೆಣಸಿನ ಕಾಯನ್ನು ಕಟ್ಟಿ ದೃಷ್ಟಿ ತೆಗೆಯಲಾಗಿದೆ. ರೋಲ್ಸ್‌ ರಾಯ್ಸ್‌ನ ಫೋಟೊ ಹಾಗೂ ವಿಡಿಯೋಗಳು ಎಲ್ಲೆಡೆ ವೈರಲ್‌ ಆಗಿವೆ.

ರಸ್ತೆಗಳಲ್ಲಿ‌ ರಾಜ ಗಾಂಭೀರ್ಯದಿಂದ ಸಾಗುವ ಈ‌ ದುಬಾರಿ ಕಾರಿಗೂ 10 ರುಪಾಯಿಯ ‘ನಿಂಬೆ-ಮೆಣಸು’ ಎಷ್ಟು ಮುಖ್ಯ ಎನ್ನುವುದನ್ನು ಈ ದೃಶ್ಯ ಹೇಳುವಂತಿದೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

ದುಷ್ಟರ ಕೆಟ್ಟ ಕಣ್ಣಿನಿಂದ ರಕ್ಷಣೆ ಪಡೆಯಲು ಭಾರತದಲ್ಲಿ ನಿಂಬೆ ಮತ್ತು ಮೆಣಸಿನ ಕಾಯಿಗಳ ಸಂಯೋಜನೆಯನ್ನು ಬಳಸಲಾಗುತ್ತದೆ. ಇವೆರಡನ್ನು ಪೋಣಿಸಿ ತೂಗು ಹಾಕಲಾಗುತ್ತದೆ. ಹಿಂದಿನಿಂದಲೂ ಈ ನಂಬಿಕೆ ಚಾಲ್ತಿಯಲ್ಲಿದೆ. ಇದೀಗ ದುಬಾರಿ ರೋಲ್ಸ್ ರಾಯ್ಸ್ ಕಾರಿಗೆ ಯಾರ ದೃಷ್ಟಿ ತಗುಲಬಾರದು ಎಂಬ ಕಾರಣಕ್ಕೆ ನಿಂಬೆಹಣ್ಣು-ಮೆಣಸಿನ ಕಾಯಿ ಕಟ್ಟಿರುವ ವಿಡಿಯೊ ಈಗ ಭಾರಿ ಸುದ್ದಿಯಾಗುತ್ತಿದೆ. ಎಷ್ಟೇ ಐಷಾರಾಮಿ ಕಾರ್‌ ಆಗಿದ್ದರೂ ಈ ವಸ್ತುಗಳು ಎಷ್ಟು ಮುಖ್ಯ ಎನ್ನುವುದನ್ನು ಈ ವಿಡಿಯೊ ಹೇಳಿದೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !