ಹೊಸದಿಗಂತ ವರದಿ ಧಾರವಾಡ:
ಸ್ನಾತಕೋತ್ತರ ವೈದ್ಯಕೀಯ ವಿಭಾಗದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ (ಡಿಮಾನ್ಸ್) ವಸತಿ ನಿಲಯದಲ್ಲಿ ಬುಧವಾರ ನಡೆದಿದೆ.
ಶಿವಮೊಗ್ಗ ಮೂಲದ ಪ್ರಜ್ಞಾ ಪಾಲೇಗರ್(೨೪) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಸೈಕಿಯಾಟ್ರಿಕ್ (ಮಾನಸಿಕ ರೋಗಶಾಸ್ತ್ರ) ಮೊದಲ ವರ್ಷದ ಸ್ನಾತ್ತಕೋತ್ತರ (ಪಿಜಿ)ವ್ಯಾಸಂಗಕ್ಕೆ ಎರಡು ವಾರಗಳ ಹಿಂದೆ ದಾಖಲಾಗಿದ್ದರು.
ಸಹಪಾಠಿ ಪ್ರಿಯಾ ಪಾಟೀಲ ಜೊತೆ ಹಾಸ್ಟೆಲ್ ಕೊಠಡಿ ಹಂಚಿಕೊಂಡಿದ್ದ ಪ್ರಜ್ಞಾಳನ್ನು ಮಂಗಳವಾರ ಪೋಷಕರು ನೋಡಲು ಧಾರವಾಡಕ್ಕೆ ಬಂದಿದ್ದರು. ಪೋಷಕರ ಭೇಟಿ ಹಿನ್ನಲೆ ಪ್ರಿಯಾ ಸಹ ಬೇರೆ ಕೊಠಡಿಯಲ್ಲಿ ಉಳಿದಿದ್ದರು.
ರಾತ್ರಿ ಪೋಷಕರು ಶಿವಮೊಗ್ಗಕ್ಕೆ ತೆರಳಿದ ನಂತರ ಕೊಠಡಿಯಲ್ಲಿ ಒಬ್ಬಳೆ ಇದ್ದಾಗ ಪ್ರಜ್ಞಾ ಫ್ಯಾನಿಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಳಿಗ್ಗೆ ಪ್ರಿಯಾ ಕೊಠಡಿಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮೃತದೇಹ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಅಪ್ಪ-ಅಮ್ಮನನ್ನು ಊರಿಗೆ ಕಳಿಸಿ ಆತ್ಮಹತ್ಯೆಗೆ ಶರಣಾದ ವೈದ್ಯಕೀಯ ವಿದ್ಯಾರ್ಥಿನಿ
ಸಾಂದರ್ಭಿಕ ಚಿತ್ರ



