Wednesday, January 28, 2026
Wednesday, January 28, 2026
spot_img

ಬಾಕ್ಸ್ ಆಫೀಸ್​​ನಲ್ಲಿ ‘ಬಾರ್ಡರ್ 2’ ಸಕ್ಸಸ್: ಹಾಗಿದ್ರೆ ನೆಕ್ಸ್ಟ್‘ಬಾರ್ಡರ್ 3’ ಬರುತ್ತಾ? ನಿರ್ಮಾಪಕರು ಹೇಳಿದ್ದೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

1997ರಲ್ಲಿ ‘ಬಾರ್ಡರ್’ ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಇದಾದ 3 ದಶಕದ ಬಳಿಕ ‘ಬಾರ್ಡರ್ 2’ (Border 2) ಸಿನಿಮಾ ಬಿಡುಗಡೆ ಆಗಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾದಲ್ಲಿ ಸನ್ನಿ ಡಿಯೋಲ್, ವರುಣ್ ಧವನ್, ಅಹಾನ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ.

ಇದೀಗ ಸಿನಿಮಾ ಸಕ್ಸಸ್ ಕಂಡು ಖುಷಿಪಟ್ಟ ಈ ಸಿನಿಮಾದ ಯಶಸ್ಸಿನಿಂದ ನಿರ್ಮಾಪಕರಿಗೆ ಖುಷಿ ಆಗಿದೆ. ಹಾಗಾಗಿ ನಿರ್ಮಾಪಕ ಭೂಷಣ್ ಕುಮಾರ್ ‘ಬಾರ್ಡರ್ 3’ ಮಾಡಲು ನಿರ್ಧರಿಸಿದ್ದಾರೆ .

ಭಾರತ ಮತ್ತು ಪಾಕಿಸ್ತಾನದ ನಡುವೆ 1971ರಲ್ಲಿ ನಡೆದ ಯುದ್ಧವನ್ನು ಆಧರಿಸಿ ‘ಬಾರ್ಡರ್ 2’ ಸಿನಿಮಾ ರೆಡಿಯಾಗಿತ್ತು. ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗಿದೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಬಾಕ್ಸ್ ಆಫೀಸ್​​ನಲ್ಲಿ ಉತ್ತಮವಾಗಿ ಕಲೆಕ್ಷನ್ ಆಗುತ್ತಿದೆ.

ಮೊದಲ ದಿನ ಈ ಸಿನಿಮಾಗೆ 32.10 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. 2ನೇ ದಿನ 40.59 ಕೋಟಿ ರೂಪಾಯಿ ಗಳಿಕೆ ಆಯಿತು. 3ನೇ ದಿನ ಬರೋಬ್ಬರಿ 57.20 ಕೋಟಿ ರೂಪಾಯಿ ಬಾಚಿಕೊಂಡಿತು.

ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 26ರಂದು ಈ ಸಿನಿಮಾವನ್ನು ಜನರು ಮುಗಿಬಿದ್ದು ನೋಡಿದರು. ಅಂದು 63.59 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. 5ನೇ ದಿನವಾದ ಮಂಗಳವಾರ (ಜ.27) 23.31 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಯಶಸ್ಸಿನಿಂದಾಗಿ ನಿರ್ಮಾಪಕರಿಗೆ ಲಾಭ ಆಗಿದೆ. ಆದ್ದರಿಂದ ‘ಬಾರ್ಡರ್ 3’ ಸಿನಿಮಾ ಮಾಡಲು ಅವರು ರೆಡಿಯಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !