ಹೊಸದಿಗಂತ ವರದಿ ಭಟ್ಕಳ :
ಎರಡು ಪ್ರತ್ಯೇಕ ಸ್ಥಳದಲ್ಲಿ ಸೋಮವಾರ ಸಂಜೆ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ಹನುಮಾನ ನಗರದ ಕನ್ನಡ ಶಾಲೆಯ ಸನಿಹದ ಸಾರ್ವಜನಿಕ ಸ್ಥಳದಲ್ಲಿ ಗಾಂಝಾ ಸೇವನೆ ಮಾಡುತ್ತಿದ್ದ ಹನಿಫಾಬಾದ್ ನಿವಾಸಿ ಮಹ್ಮದ ಸವೂದ್ ಮಹ್ಮದ ಇಸ್ಮಾಯಿಲ್ (೩೦) ಹಾಗೂ ಜಾಲಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ತಲಗೇರಿ ಕ್ರಾಸ್ ಬಳಿ ಗಾಂಝಾ ಸೇವನೆ ಮಾಡುತ್ತಿದ್ದ ಪಟ್ಟಣದ ಮಗ್ದೂಂ ಕಾಲೋನಿ ನಿವಾಸಿ ಮೊಹದ್ದೀನ್ ನೂರುಲಾಮೀನ್ ತಾಹಿರ್ (೧೯) ಅವರನ್ನು ಪೊಲೀಸರು ಬಂಸಿದ್ದಾರೆ. ವೈದ್ಯಕೀಯ ತಪಾಷಣೆ ಬಳಿಕ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



