Thursday, January 29, 2026
Thursday, January 29, 2026
spot_img

ಇದೊಂದು ಅಪಘಾತ…ಅಜಿತ್ ಪವಾರ್ ಸಾವಿನ ವಿಚಾರದಲ್ಲಿ ರಾಜಕೀಯ ಬೇಡ: ಶರದ್‌ ಪವಾರ್‌ ಮನವಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಜಿತ್ ಪವಾರ್ ಸಾವಿನ ಕುರಿತು ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ಉನ್ನತಮಟ್ಟದ ತನಿಖೆ ನಡೆಯಬೇಕೆಂದು ಒತ್ತಾಯಿಸಿದ್ದು, ಇದರ ಬೆನ್ನಲ್ಲೇ ಶರದ್ ಪವಾರ್, ಈ ವಿಮಾನ ದುರಂತವನ್ನು ರಾಜಕೀಯಗೊಳಿಸಬೇಬೇಡಿ, ಇದೊಂದು ಅಪಘಾತ ಎಂದು ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಸಹಿತ ರಾಜಕೀಯ ನಾಯಕರು ಅಪಘಾತದ ತನಿಖೆಗೆ ಒತ್ತಾಯಿಸಿದ ಬೆನ್ನಲ್ಲೇ ಶರದ್‌ ಪವಾರ್‌ ಅವರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಮಹಾರಾಷ್ಟ್ರ ಒಬ್ಬ ಕ್ರಿಯಾಶೀಲ ನಾಯಕನನ್ನು ಕಳೆದುಕೊಂಡಿದೆ. ಇದು ಮಹಾರಾಷ್ಟ್ರಕ್ಕೆ ಆಗಿರುವ ದೊಡ್ಡ ನಷ್ಟ. ಈ ಘಟನೆಯ ಹಿಂದೆ ರಾಜಕೀಯವಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಇದು ಆಕಸ್ಮಿಕ, ಮತ್ತು ಯಾವುದೇ ರಾಜಕೀಯ ಒಳಗೊಂಡಿಲ್ಲ. ಇದರಲ್ಲಿ ರಾಜಕೀಯ ತರಬಾರದು ಎಂದು ಮನವಿ ಮಾಡಿದ್ದಾರೆ.

ಈ ಅಪಘಾತವನ್ನು ಕೆಲವು ದುರುದ್ದೇಶಪೂರಿತ ಶಕ್ತಿಗಳು ರಾಜಕೀಯ ಪ್ರೇರಿತವೆಂದು ಬಿಂಬಿಸಲು ಪ್ರಯತ್ನಿಸುತ್ತಿವೆ, ಅದು ನಿಜವಲ್ಲ. ಈ ದುರಂತವನ್ನು ರಾಜಕೀಯಗೊಳಿಸಬೇಡಿ ಎಂದು ಅವರು ಕೇಳಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !