Thursday, January 29, 2026
Thursday, January 29, 2026
spot_img

ಪ್ರಯಾಣಿಕರ ಗಮನಕ್ಕೆ: ಫೆ.13-16 ರಂದು ಬೆಂಗಳೂರು-ವಿಜಯಪುರ ನಡುವೆ ವಿಶೇಷ ರೈಲು ಸಂಚಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್

ಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಭಾರೀ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ನೈಋತ್ಯ ರೈಲ್ವೆಯು ಎಸ್.ಎಂ.ವಿ.ಟಿ. ಬೆಂಗಳೂರು ಮತ್ತು ವಿಜಯಪುರ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಘೋಷಿಸಿದೆ.

ರೈಲುಗಳ ವೇಳಾಪಟ್ಟಿ ಮತ್ತು ವಿವರ:

ರೈಲು ಸಂಖ್ಯೆ 06503 (ಬೆಂಗಳೂರು – ವಿಜಯಪುರ): ಈ ರೈಲು 2026ರ ಫೆಬ್ರವರಿ 13ರಂದು (ಶುಕ್ರವಾರ) ರಾತ್ರಿ 07:15ಕ್ಕೆ ಬೆಂಗಳೂರಿನ ಎಸ್.ಎಂ.ವಿ.ಟಿ. ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 07:15ಕ್ಕೆ ವಿಜಯಪುರ ತಲುಪಲಿದೆ.

ರೈಲು ಸಂಖ್ಯೆ 06504 (ವಿಜಯಪುರ – ಬೆಂಗಳೂರು): ಮರು ಪ್ರಯಾಣದ ರೈಲು 2026ರ ಫೆಬ್ರವರಿ 16ರಂದು (ಸೋಮವಾರ) ಸಂಜೆ 05:30ಕ್ಕೆ ವಿಜಯಪುರದಿಂದ ಹೊರಟು, ಮರುದಿನ ಬೆಳಿಗ್ಗೆ 06:30ಕ್ಕೆ ಬೆಂಗಳೂರನ್ನು ತಲುಪಲಿದೆ.

ಈ ವಿಶೇಷ ರೈಲು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ (SMM), ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಒಟ್ಟು 22 ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ:

AC 2-ಟೈರ್: 02

AC 3-ಟೈರ್: 03

ಸ್ಲೀಪರ್ ಕ್ಲಾಸ್: 11

ಜನರಲ್ ಸೆಕೆಂಡ್ ಕ್ಲಾಸ್: 04

SLRD ಬೋಗಿಗಳು: 02

ಹಬ್ಬದ ಸಮಯದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಪ್ರಯಾಣಿಸುವವರಿಗೆ ಈ ವಿಶೇಷ ರೈಲು ಸಂಚಾರವು ದೊಡ್ಡ ನೆಮ್ಮದಿ ನೀಡಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !