January 30, 2026
Friday, January 30, 2026
spot_img

ಸತತ ಸೋಲಿನ ನಡುವೆಯೂ ಪ್ಲಸ್ ಪಾಯಿಂಟ್: ಸೋತರೂ ಫೈನಲ್ ಟಿಕೆಟ್ ಪಡೆಯುತ್ತಾ RCB ಪಡೆ?

ಹೊಸದಿಗಂತ ಡಿಜಿಟಲ್ ಡೆಸ್ಕ್

ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-4 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಯಣ ರೋಚಕ ಹಂತಕ್ಕೆ ತಲುಪಿದೆ. ಸತತ 5 ಪಂದ್ಯಗಳನ್ನು ಗೆದ್ದು ಬೀಗಿದ್ದ ಆರ್​ಸಿಬಿ, ಕಳೆದ ಎರಡು ಪಂದ್ಯಗಳಲ್ಲಿ ಎಡವಿದರೂ ಫೈನಲ್ ತಲುಪುವ ರೇಸ್‌ನಲ್ಲಿ ಇನ್ನೂ ಮುಂಚೂಣಿಯಲ್ಲಿದೆ.

ಇಂದು ಯುಪಿ ವಾರಿಯರ್ಸ್ ವಿರುದ್ಧ ಆರ್​ಸಿಬಿ ಮಹತ್ವದ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಬೆಂಗಳೂರು ತಂಡ ಜಯ ಸಾಧಿಸಿದರೆ, ಒಟ್ಟು 12 ಅಂಕಗಳೊಂದಿಗೆ ಯಾವುದೇ ಗೊಂದಲವಿಲ್ಲದೆ ನೇರವಾಗಿ ಫೈನಲ್ ಟಿಕೆಟ್ ಪಡೆಯಲಿದೆ.

ಒಂದು ವೇಳೆ ಯುಪಿ ವಾರಿಯರ್ಸ್ ವಿರುದ್ಧ ಆರ್​ಸಿಬಿ ಸೋತರೂ ಫೈನಲ್ ತಲುಪುವ ಅವಕಾಶ ಜೀವಂತವಾಗಿದೆ. ಸದ್ಯ ಆರ್​ಸಿಬಿ ತಂಡವು +0.947 ನಷ್ಟು ಅತ್ಯುತ್ತಮ ನೆಟ್ ರನ್ ರೇಟ್ ಹೊಂದಿದ್ದು, ಇದು ಉಳಿದ ತಂಡಗಳಿಗಿಂತ ಬಹಳ ಮುಂದಿದೆ.

ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಗುಜರಾತ್ ತಂಡದ ನೆಟ್ ರನ್ ರೇಟ್ -0.271 ರಷ್ಟಿದೆ.

ಆರ್​ಸಿಬಿ ತಂಡವನ್ನು ಹಿಂದಿಕ್ಕಬೇಕಾದರೆ, ಗುಜರಾತ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಬರೋಬ್ಬರಿ 160 ರನ್​ಗಳ ಅಂತರದಿಂದ ಗೆಲ್ಲಬೇಕು ಮತ್ತು ಆರ್​ಸಿಬಿ ದೊಡ್ಡ ಅಂತರದಿಂದ ಸೋಲಬೇಕು. ಬಲಿಷ್ಠ ಮುಂಬೈ ಎದುರು ಇಷ್ಟು ದೊಡ್ಡ ಜಯ ಅಸಾಧ್ಯವೆಂದೇ ಹೇಳಬಹುದು.

ಹೀಗಾಗಿ, ಇಂದಿನ ಪಂದ್ಯದಲ್ಲಿ ಆರ್​ಸಿಬಿ ಹೀನಾಯವಾಗಿ ಸೋಲದಿದ್ದರೆ ಸಾಕು, ನೆಟ್ ರನ್ ರೇಟ್ ಬಲದೊಂದಿಗೆ ಮಂಧಾನ ಪಡೆ ಫೈನಲ್ ಮೆಟ್ಟಿಲೇರುವುದು ಬಹುತೇಕ ಖಚಿತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !