ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಕಾಕಿನಾಡದಲ್ಲಿ ಭಯಾನಕ ಟ್ರಕ್ ಅಪಘಾತ ನಡೆದಿದೆ. ಕತಿಪುಡಿ ಪ್ರದೇಶದಲ್ಲಿ ಎರಡು ಟ್ರಕ್‌ಗಳ ನಡುವೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದ್ದು, ಓರ್ವ ಟ್ರಕ್ ಚಾಲಕ ಸಜೀವದಹನವಾಗಿದ್ದಾನೆ.
ಸಿಸಿಟಿವಿ ಫುಟೇಜ್‌ನಲ್ಲಿ ಘಟನೆಯ ದೃಶ್ಯಗಳು ದಾಖಲಾಗಿವೆ. ಪಕ್ಕದ ರಸ್ತೆ ಮೂಲಕ ಯೂಟರ್ನ್ ತೆಗೆದುಕೊಳ್ಳುತ್ತಿದ್ದ ಟ್ರಕ್‌ಗಳು ಡಿಕ್ಕಿ ಹೊಡೆದವು. ಮೊದಲ ಟ್ರಕ್‌ನ ಚಾಲಕ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾದರೆ, ಎರಡನೇ ಟ್ರಕ್‌ನ ಚಾಲಕ ಹೊರಬರಲು ಸಾಧ್ಯವಾಗದೆ ಸಜೀವದಹನವಾಗಿದ್ದಾನೆ.
ಅಪಘಾತ ಸ್ಥಳಕ್ಕೆ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಸ್ಥಳೀಯರು ಮತ್ತು ವಾಹನ ಚಾಲಕರು ತುರ್ತಾಗಿ ನೆರವು ನೀಡಿದರೂ, ಚಾಲಕನ ಬದುಕು ಉಳಿಸಲು ಸಾಧ್ಯವಾಗಲಿಲ್ಲ.



