ಹೊಸದಿಗಂತ ಡಿಜಿಟಲ್ ಡೆಸ್ಕ್
ಹೂಡಿಕೆದಾರರು ಮತ್ತು ಆಭರಣ ಪ್ರಿಯರಿಗೆ ಇಂದು ಆಘಾತಕಾರಿ ಸುದ್ದಿ ಎದುರಾಗಿದೆ. ಗುರುವಾರ ಚಿನ್ನ ಮತ್ತು ಬೆಳ್ಳಿಯ ದರ ಅಕ್ಷರಶಃ ಗಗನಕ್ಕೇರಿದ್ದು, ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದೆ. ಇತ್ತೀಚಿನ ದಶಕಗಳಲ್ಲೇ ಕಂಡುಬರದ ರೀತಿಯಲ್ಲಿ, ಕೇವಲ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 12,550 ರೂಪಾಯಿ ಏರಿಕೆಯಾಗಿದೆ.
22 ಕ್ಯಾರಟ್ (ಆಭರಣ ಚಿನ್ನ): ಪ್ರತಿ ಗ್ರಾಂ ಬೆಲೆ ಮೊದಲ ಬಾರಿಗೆ 16,000 ರೂ. ಗಡಿ ದಾಟಿದ್ದು, ಸದ್ಯ 10 ಗ್ರಾಂ ಬೆಲೆ 1,63,950 ರೂ. ತಲುಪಿದೆ.
24 ಕ್ಯಾರಟ್ (ಅಪರಂಜಿ ಚಿನ್ನ): 10 ಗ್ರಾಂ ಅಪರಂಜಿ ಚಿನ್ನದ ಬೆಲೆ 1,78,850 ರೂ. ಆಗಿದ್ದು, ಶೀಘ್ರದಲ್ಲೇ ಇದು 1.80 ಲಕ್ಷದ ಗಡಿ ದಾಟುವ ಮುನ್ಸೂಚನೆ ನೀಡಿದೆ.
ಬೆಳ್ಳಿ ಬೆಲೆಯೂ ಚಿನ್ನಕ್ಕೆ ಪೈಪೋಟಿ ನೀಡುವಂತೆ ಏರಿಕೆಯಾಗಿದ್ದು, ಒಂದೇ ದಿನದಲ್ಲಿ ಪ್ರತಿ ಗ್ರಾಂಗೆ 30 ರೂ. ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪ್ರತಿ ಗ್ರಾಂ ಬೆಳ್ಳಿ ಬೆಲೆ 410 ರೂ. ತಲುಪಿದ್ದು, 100 ಗ್ರಾಂ ಬೆಳ್ಳಿಯ ಬೆಲೆ 41,000 ರೂ. ಆಗಿದೆ. ನೆರೆಯ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದಲ್ಲಿ ಇದರ ಬೆಲೆ 42,500 ರೂ. ವರೆಗೆ ಏರಿಕೆಯಾಗಿದೆ.
ಈ ಅನಿರೀಕ್ಷಿತ ಬೆಲೆ ಏರಿಕೆಯು ಮದುವೆ ಮತ್ತು ಇತರ ಶುಭ ಕಾರ್ಯಗಳಿಗೆ ಚಿನ್ನ ಖರೀದಿಸಲು ಯೋಜಿಸುತ್ತಿದ್ದ ಜನಸಾಮಾನ್ಯರ ಮೇಲೆ ಭಾರಿ ಹೊರೆ ತಂದೊಡ್ಡಿದೆ. ಮಾರುಕಟ್ಟೆಯ ಈ ಅಸ್ಥಿರತೆಯು ಹೂಡಿಕೆದಾರರಲ್ಲಿ ತಳಮಳ ಸೃಷ್ಟಿಸಿದೆ.



