ಮಾನವನಂತೆ ಪ್ರಾಣಿಗಳಲ್ಲೂ ಪ್ರೀತಿ, ನಿಷ್ಠೆ ಮತ್ತು ಬಾಂಧವ್ಯ ಕಂಡುಬರುತ್ತದೆ. ಕೆಲವು ಪ್ರಾಣಿಗಳು ತಮ್ಮ ಸಂಗಾತಿಯೊಂದಿಗೆ ಜೀವನಪೂರ್ತಿ ಬಾಂಧವ್ಯ ಉಳಿಸಿಕೊಂಡು ಆಶ್ಚರ್ಯ ಮೂಡಿಸುತ್ತವೆ. ಇಲ್ಲಿವೆ ಸಂಬಂಧಗಳಲ್ಲಿ ಅತ್ಯಂತ ನಿಷ್ಠಾವಂತವೆಂದು ಹೆಸರಾಗಿರುವ 5 ಪ್ರಾಣಿಗಳು.
ಹಂಸಗಳು – ಜೀವಿತಪೂರ್ತಿ ಜೊತೆಯಿರುವವರು
ಹಂಸಗಳು ಒಂದು ಸಂಗಾತಿಯನ್ನು ಆಯ್ಕೆ ಮಾಡಿದ ನಂತರ ಜೀವನಪೂರ್ತಿ ಅದನ್ನೇ ಅನುಸರಿಸುತ್ತವೆ. ಇಬ್ಬರೂ ಸೇರಿ ಗೂಡು ನಿರ್ಮಿಸಿ, ಮರಿಗಳನ್ನು ಪೋಷಿಸುತ್ತವೆ. ಪ್ರೀತಿಯ ಸಂಕೇತವಾಗಿಯೇ ಹಂಸಗಳನ್ನು ನೋಡಲಾಗುತ್ತದೆ.
ತೋಳಗಳು
ತೋಳಗಳ ಗುಂಪನ್ನು ಸಾಮಾನ್ಯವಾಗಿ ಆಲ್ಫಾ ಗಂಡು ಮತ್ತು ಹೆಣ್ಣು ಮುನ್ನಡೆಸುತ್ತಾರೆ, ಅವರು ಜೀವನಪರ್ಯಂತ ಸಂಗಾತಿಗಳಾಗಿರುತ್ತಾರೆ. ಈ ಜೋಡಿ ಒಟ್ಟಾಗಿ ಬೇಟೆಯಾಡಿ, ಗುಂಪನ್ನು ರಕ್ಷಿಸಿ, ಮಕ್ಕಳನ್ನು ಬೆಳೆಸುತ್ತದೆ. ಇವರ ಸಂಬಂಧದಲ್ಲಿ ಪರಸ್ಪರ ನಂಬಿಕೆ ಮುಖ್ಯ.
ಬಾಲ್ಡ್ ಈಗಲ್ಸ್
ಬಾಲ್ಡ್ ಈಗಲ್ಸ್ ಸಾಮಾನ್ಯವಾಗಿ ಒಂದೇ ಸಂಗಾತಿಯೊಂದಿಗೆ ವರ್ಷಗಳ ಕಾಲ ಇರುತ್ತವೆ. ಪ್ರತೀ ಸೀಸನ್ ಅದೇ ಗೂಡಿಗೆ ಮರಳಿ ಬಂದು ಮರಿಗಳನ್ನು ಬೆಳೆಸುವುದು ಇವುಗಳ ವಿಶೇಷತೆ.
ಪೆಂಗ್ವಿನ್‌ಗಳು
ಪೆಂಗ್ವಿನ್‌ಗಳು ತಮ್ಮ ಸಂಗಾತಿಯೊಂದಿಗೆ ಬಲವಾದ ಬಾಂಧವ್ಯ ಹೊಂದಿರುತ್ತವೆ. ಮೊಟ್ಟೆಗಳನ್ನು ಕಾಪಾಡುವುದು ಮತ್ತು ಮರಿಗಳನ್ನು ಪೋಷಿಸುವ ಜವಾಬ್ದಾರಿಯನ್ನು ಇಬ್ಬರೂ ಹಂಚಿಕೊಳ್ಳುತ್ತಾರೆ.



