ಸಾಮಾನ್ಯ ಚಟ್ನಿಗಳಿಗಿಂತ ಸ್ವಲ್ಪ ವಿಭಿನ್ನ ರುಚಿ ಹೊಂದಿರುವ ಈ ಬೀಟ್ರೂಟ್ ಚಟ್ನಿ, ಮಕ್ಕಳಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುತ್ತೆ. ರಕ್ತವರ್ಧಕ ಗುಣಗಳಿಂದ ತುಂಬಿರುವ ಬೀಟ್ರೂಟ್‌ನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಲು ಇದು ಸುಲಭವಾದ ಹಾಗೂ ರುಚಿಕರವಾದ ವಿಧಾನ.
ಬೇಕಾಗುವ ಸಾಮಗ್ರಿಗಳು
ಬೀಟ್ರೂಟ್ – 1 ದೊಡ್ಡದು
ಈರುಳ್ಳಿ – 1 ಸಣ್ಣದು
ಹಸಿಮೆಣಸು – 2
ಬೆಳ್ಳುಳ್ಳಿ – 2–3 ಕಾಯಿ
ತುರಿ ತೆಂಗಿನಕಾಯಿ – 2 ಟೇಬಲ್ ಸ್ಪೂನ್
ಎಣ್ಣೆ – 1 ಟೀ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಒಣ ಮೆಣಸು – 1
ಕರಿಬೇವು – ಸ್ವಲ್ಪ
ಉಪ್ಪು – ರುಚಿಗೆ
ನಿಂಬೆ ರಸ / ಹುಣಸೆ – ಸ್ವಲ್ಪ
ಮಾಡುವ ವಿಧಾನ
ಮೊದಲು ಬೀಟ್ರೂಟ್ ಅನ್ನು ತೊಳೆದು ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ಒಂದು ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಬಿಸಿಯಾದ ನಂತರ ಹಸಿಮೆಣಸು, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಹಾಕಿ ಸ್ವಲ್ಪ ಹುರಿಯಿರಿ. ನಂತರ ಬೀಟ್ರೂಟ್ ತುಂಡುಗಳನ್ನು ಸೇರಿಸಿ, ಮುಚ್ಚಿ ಕಡಿಮೆ ಉರಿಯಲ್ಲಿ ಮೃದುವಾಗುವವರೆಗೆ ಬೇಯಿಸಿ. ಬೆಂದ ನಂತರ ತಣ್ಣಗಾಗಲು ಬಿಡಿ.
ಇದಕ್ಕೆ ತೆಂಗಿನಕಾಯಿ ತುರಿ, ಉಪ್ಪು ಮತ್ತು ನಿಂಬೆ ರಸ ಸೇರಿಸಿ ಮಿಕ್ಸಿಯಲ್ಲಿ ಮೃದುವಾಗಿ ರುಬ್ಬಿಕೊಳ್ಳಿ.
ಇನ್ನೊಂದು ಚಿಕ್ಕ ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಸಾಸಿವೆ, ಒಣ ಮೆಣಸು ಮತ್ತು ಕರಿಬೇವು ಹಾಕಿ ಸಿಡಿಸಿ ಇದನ್ನು ಚಟ್ನಿಗೆ ಹಾಕಿ ಮಿಶ್ರಣ ಮಾಡಿ.



