ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಜಗ್ಗೇಶ್ ಕಾರು ಚಾಲಕ ಪದ್ಮನಾಭ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದುಃಖದಿಂದ ಜಗ್ಗೇಶ್ ಪೋಸ್ಟ್ ಒಂದನ್ನು ಮಾಡಿದ್ದಾರೆ.
ಒಂದು ದಿನ ಇದ್ದದ್ದು ಮತ್ತೊಂದು ದಿನ ಇಲ್ಲವಾಗುತ್ತೆ. ನಶ್ವರ ಈ ಜಗತ್ತು. ಶ್ರೀ ಕೃಷ್ಣನ ಮಾತು. ನನ್ನ ಚಾಲಕ ಪದ್ಧ (ಪದ್ಮನಾಭ) 28 ವರ್ಷ ನನ್ನ ಚಾಲಕನಾಗಿ ಕಾರ್ಯ ನಿರ್ವಹಿಸಿದ್ದ. ನಮ್ಮ ಮನೆಯಲ್ಲಿ ಹೆಂಡತಿ, ಮಕ್ಕಳು, ಮೊಮ್ಮಗನಿಗೆ ಹಾಗು ನಮ್ಮ ಮನೆಯ ಸದಸ್ಯರು ಶ್ವಾನ (ಅರ್ಜುನ, ಪಿಂಟು, ಸೂರಜ್, ಸೂರ್ಯ) ಆತ್ಮೀಯನಾಗಿದ್ದ’ ಎಂದು ಜಗ್ಗೇಶ್ ಪೋಸ್ಟ್ ಮಾಡಿದ್ದಾರೆ.
‘ನನಗಿಂತ ಹೆಚ್ಚು ಮೊಬೈಲ್ ಕರೆ ಇವನಿಗೆ ಬರುತ್ತಿತ್ತು. ಸಿನಿಮಾ ಹಾಗು ರಾಜಕೀಯದ ನನ್ನ ಸ್ನೇಹಿತರು ಇವನಿಗೆ ಕರೆಮಾಡಿ ನನಗೆ ವಿಷಯ ಮುಟ್ಟಿಸುತ್ತಿದ್ದರು. ಕಾರಣ ನಾನು ಮೊಬೈಲ್ ಬಳಸೋಲ್ಲ. ಆ ಕಾರಣ ನನ್ನ ಬಲ್ಲ ಎಲ್ಲರಿಗೂ ತಿಳಿದಿದೆ (ಸಾಮಾಜಿಕ ಜಾಲತಾಣ ಮಾತ್ರ)’ ಎಂದು ಜಗ್ಗೇಶ್ ಅವರು ಹೇಳಿದ್ದಾರೆ.
‘ಕೇವಲ 54 ವರ್ಷ ವಯಸ್ಸಿಗೆ ಹೃದಯ ಸ್ತಂಭನವಾಗಿ ಕೊನೆ ಉಸಿರು ನಿಲ್ಲಿಸಿದ. ಅವನ ಮೇಲಿನ ಪ್ರೀತಿ ಹಾಗೂ ಸೇವೆಯ ಋಣಕ್ಕೆ ಅವನ ಕೊನೆಯ ಕ್ಷಣದವರೆಗೂ ಜೊತೆಗಿದ್ದು ವಿದಾಯ ಹೇಳಿಬಂದೆ. ಮನಸ್ಸಿಗೆ ತುಂಬಾ ದುಃಖವಾಯಿತು. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಪದ್ದ. ಹೋಗಿ ಬಾ’ ಎಂದು ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: VIRAL | 10 ಕೋಟಿ ರುಪಾಯಿ ಕಾರಿಗೆ 10 ರೂಪಾಯಿ ನಿಂಬೆಹಣ್ಣೇ ಸೇಫ್ಟಿ



