Thursday, January 29, 2026
Thursday, January 29, 2026
spot_img

ಟಿ20 ವಿಶ್ವಕಪ್‌ ಗೆ ಕ್ಷಣಗಣನೆ…ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ರಿಲೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್‌ ಗೆ ಕ್ಷಣಗಣನೆ ಶುರುವಾಗಿದ್ದು, ಭರ್ಜರಿ ಸಿದ್ದತೆಗಳು ನಡೆಯುತ್ತಿದೆ. ಇದರ ಭಾಗವಾಗಿ ಅಭ್ಯಾಸ ಪಂದ್ಯಗಳನ್ನು ನಡೆಯಲಿದ್ದು, ಒಟ್ಟು 16 ಅಭ್ಯಾಸ ಪಂದ್ಯಗಳು ನಡೆಯಲಿವೆ. ಭಾರತ ತಂಡ ಒಂದು ಪಂದ್ಯವನ್ನು ಆಡಲಿದೆ.

ಫೆಬ್ರವರಿ 4 ರಂದು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಒಂದೇ ಒಂದು ಅಭ್ಯಾಸ ಪಂದ್ಯವನ್ನು ಆಡಲಿದೆ.

ವಿಶ್ವಕಪ್‌ಗೆ ಮೊದಲು ಭಾರತ ಎ, ನೇಪಾಳ ಮತ್ತು ನ್ಯೂಜಿಲೆಂಡ್ ವಿರುದ್ಧ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಮಾತ್ರ ಮೂರು ಅಭ್ಯಾಸ ಪಂದ್ಯಗಳನ್ನು ಆಡುತ್ತಿದೆ.

ಇಂಗ್ಲೆಂಡ್ ಮತ್ತು ಶ್ರೀಲಂಕಾ ಮಾತ್ರ ವಿಶ್ವಕಪ್‌ಗೆ ಮೊದಲು ಅಧಿಕೃತವಾಗಿ ಯಾವುದೇ ಅಭ್ಯಾಸ ಪಂದ್ಯಗಳನ್ನು ಆಡುತ್ತಿಲ್ಲ. ಜನವರಿ 30 ರಿಂದ ಫೆಬ್ರವರಿ 3 ರವರೆಗೆ ಪಲ್ಲೆಕೆಲೆಯಲ್ಲಿ ಮೂರು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.

ಟಿ20 ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಆಡುತ್ತಿರುವ ಏಕೈಕ ತಂಡ ಇಟಲಿ, ಫೆಬ್ರವರಿ 2 ಮತ್ತು 6 ರಂದು ಕೆನಡಾ ಮತ್ತು ಯುಎಇ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.

ಟಿ20 ವಿಶ್ವಕಪ್ 2026 ಅಭ್ಯಾಸ ಪಂದ್ಯಗಳ ವೇಳಾಪಟ್ಟಿ

ಫೆಬ್ರವರಿ 2
ಅಫ್ಘಾನಿಸ್ತಾನ vs ಸ್ಕಾಟ್ಲೆಂಡ್ (ಮಧ್ಯಾಹ್ನ 3)

ಭಾರತ ಎ vs ಅಮೆರಿಕ (ಸಂಜೆ 5)

ಕೆನಡಾ vs ಇಟಲಿ (ಸಂಜೆ 7)

ಫೆಬ್ರವರಿ 3
ಶ್ರೀಲಂಕಾ ಎ vs ಓಮನ್ (ಮಧ್ಯಾಹ್ನ 1)

ನೆದರ್ಲ್ಯಾಂಡ್ಸ್ vs ಜಿಂಬಾಬ್ವೆ (ಮಧ್ಯಾಹ್ನ 3)

ನೇಪಾಳ vs ಅಮೆರಿಕ (ಸಂಜೆ 5)

ಫೆಬ್ರವರಿ 4
ನಮೀಬಿಯಾ vs ಸ್ಕಾಟ್ಲೆಂಡ್ (ಮಧ್ಯಾಹ್ನ 1)

ಅಫ್ಘಾನಿಸ್ತಾನ vs ವೆಸ್ಟ್ ಇಂಡೀಸ್ (ಮಧ್ಯಾಹ್ನ 3)

ಐರ್ಲೆಂಡ್ vs ಪಾಕಿಸ್ತಾನ (ಸಂಜೆ 5)

ಭಾರತ vs ದಕ್ಷಿಣ ಆಫ್ರಿಕಾ (ಸಂಜೆ 7)

ಫೆಬ್ರವರಿ 5
ಓಮನ್ vs ಜಿಂಬಾಬ್ವೆ (ಮಧ್ಯಾಹ್ನ 1)

ಕೆನಡಾ vs ನೇಪಾಳ (ಮಧ್ಯಾಹ್ನ 3)

ಆಸ್ಟ್ರೇಲಿಯಾ vs ನೆದರ್ಲ್ಯಾಂಡ್ಸ್ (ಸಂಜೆ 5)

ನ್ಯೂಜಿಲೆಂಡ್ vs ಅಮೆರಿಕ (ಸಂಜೆ 7)

ಫೆಬ್ರವರಿ 6
ಇಟಲಿ vs ಯುಎಇ (ಮಧ್ಯಾಹ್ನ 3)

ಭಾರತ ಎ vs ನಮೀಬಿಯಾ (ಸಂಜೆ 5)

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !