Thursday, January 29, 2026
Thursday, January 29, 2026
spot_img

ಕೋಲ್ಕತ್ತಾದ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ: 21 ಮಂದಿ ಸಜೀವ ದಹನ, ಇನ್ನೂ ಸಿಗದ 28 ಜನರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಲ್ಕತ್ತಾ ಬಳಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 21 ಕ್ಕೆ ಏರಿದ್ದು, ಸುಟ್ಟುಹೋದ ಕಟ್ಟಡಗಳಿಂದ ಇನ್ನೂ 13 ಶವಗಳು ಪತ್ತೆಯಾಗಿವೆ, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.

ದಕ್ಷಿಣ 24 ಪರಗಣ ಜಿಲ್ಲೆಯ ಆನಂದಪುರದಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಎರಡು ಗೋದಾಮುಗಳು ಮತ್ತು ಮೊಮೊ ಕಂಪನಿಯ ಒಂದು ಉತ್ಪಾದನಾ ಘಟಕ ಸುಟ್ಟು ಭಸ್ಮವಾಯಿತು. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಟ್ಟಡವಿದ್ದ ರಸ್ತೆ ಮಾರ್ಗದಲ್ಲಿ ಸಂಚಾರ ನಿರ್ಬಂಧ ವಿಧಿಸಿ, ಬಿಎನ್‌ಎಸ್‌ ಸೆಕ್ಷನ್‌ 163 ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಪತ್ತೆಯಾಗಿರುವ 21 ದೇಹಗಳು ಅಥವಾ ದೇಹದ ಭಾಗಗಳ ಡಿಎನ್‌ಎ ಮ್ಯಾಪಿಂಗ್ ಗುರುವಾರದಿಂದ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !