Thursday, January 29, 2026
Thursday, January 29, 2026
spot_img

ವಂದೇ ಭಾರತ್ ಸ್ಲೀಪರ್ ಗೆ ಪ್ರಯಾಣಿಕರು ಫಿದಾ: ಹೊಸ ಪ್ರಯೋಗಕ್ಕೆ ಮುಂದಾದ ರೈಲ್ವೆ ಇಲಾಖೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಮೊದಲ ಸೆಮಿ ಹೈ ಸ್ಪೀಡ್ ಸ್ಲೀಪರ್ ರೈಲಾದ ವಂದೇ ಭಾರತ್ ಸ್ಲೀಪರ್ ಪ್ರಸುತ್ತ ಗುವಾಹಟಿ ಮತ್ತು ಹೌರಾ ನಡುವೆ ಸಂಚರಿಸುತ್ತಿದೆ. ಇದೀಗ ಇದರ ಜನಪ್ರಿಯತೆ ಹೆಚ್ಚುತ್ತಿದ್ದು, ಭಾರತೀಯ ರೈಲ್ವೆ ಈ ರೈಲಿನಲ್ಲಿ ಹೊಸ ಪ್ರಯೋಗಗಳನ್ನು ನಡೆಸಲು ಮುಂದಾಗಿದೆ.

ಸದ್ಯಕ್ಕೆ ವಂದೇ ಭಾರತ್ ಸ್ಲೀಪರ್ ರೈಲುಗಳು 16 ಬೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಇದು 823 ಬರ್ತ್‌ಗಳನ್ನು ಹೊಂದಿವೆ. ಇದೀಗ ಹೆಚ್ಚಿನ ಜನರಿಗೆ ಈ ಸ್ಲೀಪರ್ ರೈಲಿನಲ್ಲಿ ಸಂಚರಿಸಲು ಸಹಾಯವಾಗಲಿ ಎಂಬ ಉದ್ದೇಶದಿಂದ ಈ ರೈಲಿನಲ್ಲಿ ಕೋಚ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

ಮುಂದಿನ ದಿನಗಳಲ್ಲಿ ಇನ್ನೂ 8 ಬೋಗಿಗಳನ್ನು ಸೇರಿಸಲಾಗುತ್ತದೆ. ಒಟ್ಟು 24 ಬೋಗಿಗಳ ಸಾಮರ್ಥ್ಯವನ್ನು ಹೊಂದಿರುವ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದರಲ್ಲಿ 1,224 ಬರ್ತ್‌ಗಳಿರಲಿದೆ.

ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ ಕೋಚ್‌ಗಳ ಸಂಖ್ಯೆಯನ್ನು ರೈಲ್ವೆ ಇಲಾಖೆ ವಿಸ್ತರಿಸುತ್ತಿದೆ. ಮೊದಲ ಬಾರಿಗೆ, ವಂದೇ ಭಾರತ್ ರೈಲುಗಳಿಗೆ 24 ಕೋಚ್‌ಗಳನ್ನು ಸೇರಿಸಲು ನಿರ್ಧರಿಸಲಾಗಿದೆ.

ರೈಲ್ವೆ ಇಲಾಖೆಯ ಪ್ರಕಾರ, 24 ಬೋಗಿಗಳ ರೈಲನ್ನು ಮೇಕ್ ಇನ್ ಇಂಡಿಯಾ ಉಪಕ್ರಮದಡಿಯಲ್ಲಿ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಯಲ್ಲಿ ತಯಾರಿಸಲಾಗುವುದು.

ಭಾರತೀಯ ರೈಲ್ವೆ ವಿನ್ಯಾಸಗೊಳಿಸುತ್ತಿರುವ 24 ಬೋಗಿಗಳ ಮೊದಲ ರೈಲು 2026ರ ಅಂತ್ಯದ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ. ಈ ರೈಲು 17 ಎಸಿ 3-ಬೋಗಿಗಳು, 5 ಎಸಿ 2-ಬೋಗಿಗಳು, 1 ಎಸಿ ಪ್ರಥಮ ದರ್ಜೆ ಕೋಚ್ ಮತ್ತು 1 ಎಸಿ ಪ್ಯಾಂಟ್ರಿ ಕಾರ್ ಅನ್ನು ಒಳಗೊಂಡಿರುತ್ತದೆ. 24 ಬೋಗಿಗಳ ವಂದೇ ಭಾರತ್ ಆರಾಮದಾಯಕ ಬರ್ತ್‌ಗಳು ರೀಡಿಂಗ್ ಲ್ಯಾಂಪ್, ಮೊಬೈಲ್-ಲ್ಯಾಪ್‌ಟಾಪ್ ಚಾರ್ಜಿಂಗ್ ಪಾಯಿಂಟ್‌ಗಳು, ವೈ-ಫೈ ಮಾಹಿತಿ ಮತ್ತು ಮನರಂಜನಾ ವ್ಯವಸ್ಥೆ, ನಿರ್ವಾತ ಶೌಚಾಲಯಗಳು, ಹೆಚ್ಚಿನ ಲಗೇಜ್ ಸ್ಥಳ, ಆಧುನಿಕ ಒಳಾಂಗಣಗಳು, ಅಂಗವಿಕಲ ಪ್ರಯಾಣಿಕರಿಗಾಗಿ ವಿಶೇಷ ಶೌಚಾಲಯಗಳು ಮತ್ತು ರ‍್ಯಾಂಪ್‌ಗಳನ್ನು ಹೊಂದಿರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !