ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ಸಿನಿಮಾ ‘ಬ್ರಮಯುಗಂ’ ಗೆ ಆಸ್ಕರ್ ಗೌರವ ಲಭಿಸಿದೆ.
ಮಮ್ಮುಟಿ ನಟನೆಯ ‘ಬ್ರಮಯುಗಂ’ ಸಿನಿಮಾವನ್ನು ಈಗಾಗಲೇ ವಿದೇಶದ ಕೆಲವು ಸಿನಿಮಾ ತರಗತಿಗಳಲ್ಲಿ ಪಠ್ಯವಾಗಿ ಬಳಸಾಗುತ್ತಿದೆ. ಇದೀಗ ಈ ಸಿನಿಮಾಕ್ಕೆ ಆಸ್ಕರ್ ಅಥವಾ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆಂಡ್ ಸೈನ್ಸ್ ಕಡೆಯಿಂದ ಗೌರವ ಸಿಕ್ಕಿದೆ.
ಆಸ್ಕರ್ಸ್ನ ವಿಶೇಷ ಸಿನಿಮಾ ಸ್ಕ್ರೀನಿಂಗ್ಗೆ ಭಾರತದ ಮಲಯಾಳಂನ ‘ಬ್ರಮಯುಗಂ’ ಆಯ್ಕೆ ಆಗಿದೆ. ಫೆಬ್ರವರಿ 12 ರಂದು ಲಾಸ್ ಏಂಜಲ್ಸ್ನ ಆಸ್ಕರ್ಸ್ ಮ್ಯೂಸಿಯಂನಲ್ಲಿ ವಿಶೇಷ ಪ್ರದರ್ಶನ ಕಾಣಲಿದೆ.
ಈ ವಿಶೇಷ ಪ್ರದರ್ಶನಕ್ಕೆ ಸಿನಿಮಾದ ನಿರ್ದೇಶಕ ರಾಹುಲ್ ಸದಾಶಿವನ್ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ‘ಬ್ರಮಯುಗಂ’ ಸಿನಿಮಾದ ತಂತ್ರಜ್ಞಾನ ನೈಪುಣ್ಯತೆ ಮತ್ತು ಸಿನಿಮಾದ ಮುಖ್ಯ ಪಾತ್ರಧಾರಿಯಾದ ಮಮ್ಮುಟಿ ಅವರ ಅದ್ಭುತ ನಟನೆಗಾಗಿ ಈಗಾಗಲೇ ಸಾಕಷ್ಟು ಪ್ರಶಂಸೆ ಮನ್ನಣೆಯನ್ನು ಸಿನಿಮಾ ಗಳಿಸಿಕೊಂಡಿದೆ. ಇದೀಗ ಆಸ್ಕರ್ಸ್ ಸಹ ಈ ಸಿನಿಮಾದ ಗುಣಮಟ್ಟವನ್ನು ಗುರುತಿಸಿ ವಿಶೇಷ ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಂಡಿದೆ.
ಆಸ್ಕರ್ಸ್ನ ವಿಶೇಷ ಪ್ರದರ್ಶನಕ್ಕೆ ಆಯ್ದುಕೊಂಡ ಮೊಟ್ಟ ಮೊದಲ ಭಾರತೀಯ ಸಿನಿಮಾ ‘ಬ್ರಹ್ಮಯುಗಂ’ ಎನ್ನಲಾಗುತ್ತಿದೆ. ಇದೊಂದು ಹಾರರ್ ಕಥಾನಕ ಹೊಂದಿದ ಸಿನಿಮಾ ಆಗಿದೆ. ಸಿನಿಮಾಕ್ಕೆ 2024ರ ಕೇರಳ ರಾಜ್ಯ ಅತ್ಯುತ್ತಮ ಸಿನಿಮಾ ಪ್ರಶಸ್ತಿ ದೊರೆತಿದೆ.



