ಹೊಸದಿಗಂತ ವರದಿ, ರಾಯಚೂರು:
ಜಿಲ್ಲೆಯ ಸಿರವಾರ ತಾಲೂಕಿನ ಚಿಕ್ಕಹಣಗಿ ಗ್ರಾಮದಲ್ಲಿ ಮಾವ ಸೊಸೆಯ ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ಗುರುವಾರ ನಡೆದಿದೆ.
ಹತ್ಯೆಗೊಳಗಾದವಳನ್ನು ನಾಲ್ಕು ತಿಂಗಳ ಗರ್ಭಿಣಿ ರೇಖಾ (೨೫) ಎಂದು ಗುರುತಿಸಲಾಗಿದೆ. ರೇಖಾಳನ್ನು ಸೋದರತ್ತೆ ಮಗ ಹಿರೇಹಣಗಿ ಗ್ರಾಮದ ನಾಗರಾಜನಿಗೆ ಕಳೆದ ಮೂರು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು.
ನಾಗರಾಜನ ಅಪ್ಪ, ಅಮ್ಮ ತನ್ನ ಹೆಂಡತಿಗೆ ಕಿರುಕಿಳ ಕೊಡುತ್ತಿರುವುದನ್ನು ಗಮನಿಸಿ ಚಿಕ್ಕಹಣಗಿ ಗ್ರಾಮದಲ್ಲಿ ಮನೆ ಮಾಡಿಕೊಂಡು ಗಂಡ ಹೆಂಡತಿ ವಾಸಿಸುತ್ತಿದ್ದರು.
ಇದನ್ನು ಸಹಿಸದ ರೇಖಾಳ ಮಾವ ಸಿದ್ದಪ್ಪ ಬುಧವಾರ ಮನೆಯಲ್ಲಿ ಸೊಸೆ ಒಬ್ಬಳೇ ಇದ್ದದ್ದನ್ನು ಗಮನಿಸಿ ಮನೆಗೆ ತೆರಳಿ ಚಾಕುವಿನಿಂದ ಕತ್ತಿಗೆ ಚುಚ್ಚಿದ್ದಾನೆ. ಹೆಚ್ಚಿನ ರಕ್ತಸ್ರಾವದಿಂದ ರೇಖಾ ಮನೆಯ ಮುಂದಿನ ಕಟ್ಟಯ ಮೇಲೆ ಮೃತಪಟ್ಟಿದ್ದಾಳೆ.
ಪ್ರಕರಣ ಕವಿತಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅರುಣಾಂಗ್ಷು ಗಿರಿ ಸೇರಿದಂತೆ ಇತರೆ ಪೊಲೀಸ್ ಅಽಕಾರಿಗಳು ಭೇಟಿ ನೀಡಿದ್ದಾರೆ. ಆರೋಪಿ ಸಿದ್ದಪ್ಪನನ್ನು ಬಂಽಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.



