January 30, 2026
Friday, January 30, 2026
spot_img

ಅಮ್ಮನ ಹುಟ್ಟುಹಬ್ಬಕ್ಕೆ ಎರಡು ಜಿರಾಫ್‌ ದತ್ತು ತೆಗೆದುಕೊಂಡ ನಟ ಪವನ್‌ ಕಲ್ಯಾಣ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ವಿಶಾಖಪಟ್ಟಣಕ್ಕೆ ಭೇಟಿ ನೀಡಿದ್ದು, ಇಂದಿರಾ ಗಾಂಧಿ ಪ್ರಾಣಿ ಪಾರ್ಕ್​​ನಲ್ಲಿರುವ ಎರಡು ಜಿರಾಫ್‌ಗಳನ್ನು ದತ್ತು ತೆಗೆದುಕೊಂಡಿದ್ದಾರೆ.

ಪವನ್ ಕಲ್ಯಾಣ್ ತಮ್ಮ ತಾಯಿ ಅಂಜನಾ ದೇವಿಯ ಹುಟ್ಟುಹಬ್ಬವನ್ನು ಆಚರಿಸಲು ಮೃಗಾಲಯದಿಂದ ಎರಡು ಜಿರಾಫ್‌ಗಳನ್ನು ಒಂದು ವರ್ಷದವರೆಗೆ ದತ್ತು ತೆಗೆದುಕೊಳ್ಳುವುದಾಗಿ ಘೋಷಿಸಿದರು. ಎರಡು ಜಿರಾಫೆಗಳ ವೆಚ್ಚವನ್ನು ಒಂದು ವರ್ಷದವರೆಗೆ ಭರಿಸುವುದಾಗಿ ಅವರು ಬಹಿರಂಗಪಡಿಸಿದರು.

ನಮ್ಮ ದೇಶದಲ್ಲಿ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಮೃಗಾಲಯಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಅವು ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸುತ್ತವೆ. ಸುಮಾರು 650 ಎಕರೆ ಪ್ರದೇಶದಲ್ಲಿ ಹರಡಿರುವ ವಿಶಾಖಪಟ್ಟಣ ಮೃಗಾಲಯದಲ್ಲಿ ನೂರಾರು ಕಾಡು ಪ್ರಾಣಿಗಳು ಮತ್ತು ಪಕ್ಷಿಗಳು ಆಹ್ಲಾದಕರ ವಾತಾವರಣದಲ್ಲಿ ವಾಸಿಸುತ್ತವೆ.

ಅವುಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮೃಗಾಲಯಗಳ ಅಭಿವೃದ್ಧಿಯಲ್ಲಿ ಕಾರ್ಪೊರೇಟ್‌ಗಳು ಪಾಲುದಾರರಾಗಿರಬೇಕು. ಅವರು ತಮ್ಮ ಇಷ್ಟ ಪ್ರಾಣಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಅವುಗಳನ್ನು ದತ್ತು ಪಡೆಯಬೇಕು ನಮ್ಮ ಇಡೀ ಕುಟುಂಬವು ಪ್ರಾಣಿ ಪ್ರಿಯರು. ನಾವು ಪ್ರಾಣಿ ಕಲ್ಯಾಣಕ್ಕೆ ಹೆಚ್ಚಿನ ಗಮನ ನೀಡುತ್ತೇವೆ ಎಂದು ಹೇಳಿದರು.



Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !