ಪ್ರೀತಿ ಅನ್ನೋದು ಹೇಳಿಕೊಳ್ಳೋ ಪದಕ್ಕಿಂತ ಅನುಭವಿಸೋ ಕ್ಷಣ. ಆ ಕ್ಷಣಗಳು ನೆನಪಾಗಿ ಉಳಿಯಬೇಕಾದ್ರೆ, ಜಾಗವೂ ಅಷ್ಟೇ ವಿಶೇಷವಾಗಿರಬೇಕು. ಪ್ರೇಮಿಗಳ ದಿನ ಬಂದಾಗ, “ಎಲ್ಲಿ ಹೋಗ್ಬೋದು?” ಅನ್ನೋ ಪ್ರಶ್ನೆ ಸಹಜ. ಉತ್ತರ ಹುಡುಕೋದಕ್ಕೆ, ಭಾರತವೇ ಸಾಕು.
ಪ್ರೀತಿಯ ಸಂಕೇತವೆಂದು ಕರೆಯಲ್ಪಡುವ ತಾಜ್ ಮಹಲ್, ಮೌನವಾಗಿಯೇ ಅನೇಕ ಪ್ರೇಮಕಥೆಗಳನ್ನು ಹೇಳುತ್ತದೆ. ಆ ಶ್ವೇತ ಸೌಂದರ್ಯದ ಮುಂದೆ ನಿಂತಾಗ, ಪ್ರೀತಿಗೆ ಪದಗಳೇ ಬೇಡ ಅನ್ನಿಸುವ ಅನುಭವ ಸಿಗುತ್ತೆ.
ಅದೇ ರೀತಿ, ಉತ್ತರಾಖಂಡದ ಹೂವಿನ ಕಣಿವೆ ಅಲ್ಲಿ ಹರಡಿರುವ ಬಣ್ಣಬಣ್ಣದ ಹೂವುಗಳು ಪ್ರೀತಿಯ ಭಾವನೆಗೆ ಹೊಸ ಅರ್ಥ ಕೊಡುತ್ತವೆ. ಪ್ರಕೃತಿಯ ನಡುವೆ, ಮಾತಿಲ್ಲದೇ ಪ್ರೀತಿ ಹೇಳೋಕೆ ಅದಕ್ಕಿಂತ ಅದ್ಭುತ ಜಾಗ ಬೇಡ.
ಮಳೆಮೋಡಗಳ ನಡುವೆ ನೆಲೆಸಿರುವ ಊಟಿ, ನಿಧಾನವಾಗಿ ಬದುಕೋ ಪಾಠ ಕಲಿಸುತ್ತೆ. ಸರೋವರದಲ್ಲಿ ದೋಣಿ ವಿಹಾರ, ಬೆಟ್ಟಗಳ ನಡುವೆ ಟಾಯ್ ಟ್ರೈನ್ ಪ್ರಯಾಣ ಇವೆಲ್ಲಾ ಜೋಡಿಗೆ ತಮ್ಮದೇ ಲೋಕ ಕಟ್ಟಿಕೊಳ್ಳುವ ಅವಕಾಶ.
ಇದನ್ನೂ ಓದಿ:
ಇನ್ನೊಂದು ಕಡೆ, ಲಕ್ಷದ್ವೀಪದ ನೀಲಿ ಸಮುದ್ರ ಮತ್ತು ಶಾಂತ ದ್ವೀಪಗಳು ಪ್ರೀತಿಗೆ ನಿಶ್ಶಬ್ದ ಹಿನ್ನೆಲೆ ಸೃಷ್ಟಿಸುತ್ತವೆ. ಅಲ್ಲಿ ಸಮಯವೂ ನಿಧಾನವಾಗಿ ಸಾಗುತ್ತೆ.
ಕೊನೆಗೆ, ಉದಯಪುರ. ಸರೋವರಗಳು, ಅರಮನೆಗಳು ಮತ್ತು ಸೂರ್ಯಾಸ್ತದ ಬಣ್ಣಗಳು, ರಾಜಮನೆತನದ ಕಥೆಯಂತೆ ಅನಿಸೋ ಜಾಗ. ಪಿಚೋಲಾ ಸರೋವರದಲ್ಲಿ ಸೂರ್ಯಾಸ್ತದ ಸಮಯದಲ್ಲಿ ಕಳೆಯುವ ಕ್ಷಣ, ಜೀವನಪೂರ್ತಿ ಜೊತೆಗಿರೋ ನೆನಪಾಗಬಹುದು.



