January 30, 2026
Friday, January 30, 2026
spot_img

ಮತ್ತೆ ಇನ್ಸ್ಟಾಗ್ರಾಂನಲ್ಲಿ ಆಕ್ಟಿವ್ ಆದ ಕಿಂಗ್ ಕೊಹ್ಲಿ, ಅಭಿಮಾನಿಗಳು ಫುಲ್ ಖುಷ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗುರುವಾರ ರಾತ್ರೋರಾತ್ರಿ ಕಣ್ಮರೆಯಾದ ನಂತರ ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಇನ್‌ಸ್ಟಾಗ್ರಾಮ್ ಖಾತೆ ಮತ್ತೆ ಲೈವ್ ಆಗಿದೆ.

ವಿಶ್ವದ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಕ್ರೀಡಾಪಟುಗಳಲ್ಲಿ ಒಬ್ಬರಾದ ಕೊಹ್ಲಿ ಅವರ ಸಾಮಾಜಿಕ ಮಾಧ್ಯಮ ಖಾತೆ ನಿಗೂಢವಾಗಿ ಕಣ್ಮರೆಯಾಗಿತ್ತು. ವಿರಾಟ್ ಮಾತ್ರವಲ್ಲ, ವಿರಾಟ್ ಸಹೋದರ ವಿಕಾಸ್ ಅವರ ಇನ್‌ಸ್ಟಾಗ್ರಾಮ್ ಕೂಡ ರಾತ್ರೋರಾತ್ರಿ ನಿಷ್ಕ್ರಿಯಗೊಂಡಂತೆ ತೋರುತ್ತಿದೆ.

ಇದನ್ನೂ ಓದಿ: ದೇವಸ್ಥಾನಕ್ಕೆ ಹೋಗೋವಾಗ ಕಪ್ಪು ಬಟ್ಟೆ ಧರಿಸಬಾರ್ದು ಅಂತಾರಲ್ಲ ಯಾಕೆ?

ವಿರಾಟ್ ಕೊಹ್ಲಿ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯು ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತಿದ್ದಂತೆ ಅವರ ಫಾಲೋವರ್ಸ್ ಅನ್ನು ಗೊಂದಲಕ್ಕೀಡು ಮಾಡಿದ್ದಲ್ಲದೇ ಆನ್‌ಲೈನ್‌ನಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಗೊಂದಲ, ಆಕ್ರೋಶ, ಅಚ್ಚರಿ ವ್ಯಕ್ತವಾಗಿತ್ತು. ಕೊಹ್ಲಿಗೆ 274 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್‌ಗಳಿದ್ದರು.

ಇದೀಗ ಕೊಹ್ಲಿಯ ಖಾತೆ ಬೆಳಿಗ್ಗೆ 8:30 ರ ಸುಮಾರಿಗೆ ಹಿಂತಿರುಗಿದ್ದರೂ, ಅವರ ಸಹೋದರ ವಿಕಾಸ್ ಅವರ ಖಾತೆ ನಿಷ್ಕ್ರಿಯವಾಗಿದೆ. ಕಣ್ಮರೆ ಉದ್ದೇಶಪೂರ್ವಕವಾಗಿದೆಯೇ ಅಥವಾ ತಾಂತ್ರಿಕ ದೋಷದ ಪರಿಣಾಮವೇ ಎಂಬುದರ ಕುರಿತು ಕೊಹ್ಲಿ, ಅವರ ತಂಡ ಅಥವಾ ಇನ್‌ಸ್ಟಾಗ್ರಾಮ್‌ನಿಂದ ಯಾವುದೇ ಅಧಿಕೃತ ವಿವರಣೆ ಬಂದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !