January 30, 2026
Friday, January 30, 2026
spot_img

CINE | ಥಿಯೇಟರ್ ಹಿಟ್ ‘ಧುರಂಧರ್’ ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ: ಆದ್ರೆ ಕನ್ನಡ ಸಿನಿ ಪ್ರೇಮಿಗಳು ನೋಡೋಕಾಗಲ್ವಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರಮಂದಿರಗಳಲ್ಲಿ ಅಬ್ಬರಿಸಿ, ಬಾಕ್ಸ್ ಆಫೀಸ್‌ನಲ್ಲಿ ತನ್ನದೇ ಗುರುತು ಬಿಟ್ಟ ‘ಧುರಂಧರ್’ ಸಿನಿಮಾ ಈಗ ಡಿಜಿಟಲ್ ವೇದಿಕೆಗೆ ಕಾಲಿಟ್ಟಿದೆ. ಡಿಸೆಂಬರ್ 5ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದ್ದು, ಒಟಿಟಿ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಥಿಯೇಟರ್ ರಿಲೀಸ್ ಸಮಯದಲ್ಲಿ ‘ಧುರಂಧರ್’ ಕೇವಲ ಹಿಂದಿ ಭಾಷೆಯಲ್ಲೇ ಪ್ರದರ್ಶನ ಕಂಡಿತ್ತು. ಒಟಿಟಿ ಬಿಡುಗಡೆ ವೇಳೆ ಚಿತ್ರವನ್ನು ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗಿದೆ. ಆದರೆ ಕನ್ನಡ ಭಾಷೆ ಇಲ್ಲದಿರುವುದು ಕನ್ನಡ ಸಿನಿಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ.

ಇದನ್ನೂ ಓದಿ:

ಈ ಚಿತ್ರದಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆದಿತ್ಯ ಧಾರ್ ನಿರ್ದೇಶನ ಮಾಡಿದ್ದಾರೆ. ಬಿಡುಗಡೆಗೂ ಮುನ್ನ ನೆಗೆಟಿವ್ ಪ್ರಚಾರ ಎದುರಿಸಿದ್ದರೂ, ಚಿತ್ರ ತನ್ನ ವಿಷಯ ಮತ್ತು ನಿರೂಪಣೆಯಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಒಟಿಟಿಯಲ್ಲಿ ಇದರ ಅವಧಿ ಸುಮಾರು ಮೂರುವರೆ ಗಂಟೆಗಳಷ್ಟಿದೆ.

ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಂಡವರು ಅಥವಾ ಮತ್ತೊಮ್ಮೆ ನೋಡಲು ಬಯಸುವವರು ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ‘ಧುರಂಧರ್’ ವೀಕ್ಷಿಸಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !