ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಹಲವು ನಗರಗಳಲ್ಲಿ ವಾಯು ಗುಣಮಟ್ಟ ತೀವ್ರವಾಗಿ ಕುಸಿದಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ವಿಶೇಷವಾಗಿ ಬೆಂಗಳೂರು ಸೇರಿದಂತೆ ಬಳ್ಳಾರಿ, ಮಂಗಳೂರು, ಮೈಸೂರು ನಗರಗಳಲ್ಲಿ AQI ಮಟ್ಟ ನಿರಂತರ ಏರುಪೇರು ಕಾಣಿಸುತ್ತಿದ್ದು, ಕೆಲವು ನಗರಗಳು ಗಂಭೀರ ಹಂತಕ್ಕೆ ತಲುಪಿವೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ ಬಳ್ಳಾರಿಯಲ್ಲಿ AQI 222ಕ್ಕೆ ಏರಿಕೆಯಾಗಿದ್ದು, ಇದು ‘ಗಂಭೀರ’ ವರ್ಗಕ್ಕೆ ಸೇರುತ್ತದೆ. ಈ ಪರಿಸ್ಥಿತಿ ಮುಂದುವರೆದರೆ ದೆಹಲಿಯಂತಹ ಸ್ಥಿತಿ ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇದನ್ನೂ ಓದಿ:
ಬೆಂಗಳೂರಿನಲ್ಲಿ ಇಂದು AQI 192 ದಾಖಲಾಗಿದ್ದು, ಇದು ಆರೋಗ್ಯಕ್ಕೆ ಹಾನಿಕರವಾದ ಮಟ್ಟವಾಗಿಯೇ ಉಳಿದಿದೆ. ಮಂಗಳೂರು (170), ಮೈಸೂರು (140) ಸೇರಿದಂತೆ ಇತರ ನಗರಗಳಲ್ಲೂ ಗಾಳಿಯ ಗುಣಮಟ್ಟ ಕಳಪೆ ಹಂತದಲ್ಲಿದೆ.



