ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 1ರಂದು ಮಂಡನೆಯಾಗುವ ಬಜೆಟ್‌ನಲ್ಲಿ ಏನಿರುತ್ತೆ, ಏನಿರಲ್ಲ, ಯಾರಿಗೆ ಹೆಚ್ಚು ಭಾಗ್ಯ, ಇತ್ಯಾದಿ ನಿರೀಕ್ಷೆ, ಅಪೇಕ್ಷೆಗಳು ಬಹಳ ಇವೆ.
ಪ್ರತೀ ಬಜೆಟ್‌ನಲ್ಲಿ ಜನಸಾಮಾನ್ಯರು ಅತಿಹೆಚ್ಚು ಗಮನಿಸುವುದು ಆದಾಯ ತೆರಿಗೆ ಅಂಶಗಳನ್ನು. ಈ ಬಾರಿಯ ಬಜೆಟ್‌ನಲ್ಲಿ ಇನ್ಕಮ್ ಟ್ಯಾಕ್ಸ್ ವಿಚಾರವನ್ನು ನಿರ್ಮಲಾ ಸೀತಾರಾಮನ್ ತರುತ್ತಾರಾ ಎನ್ನುವುದು ಪ್ರಶ್ನೆಯಾಗಿದೆ.
ಕಳೆದ ವರ್ಷದ ಬಜೆಟ್‌ನಲ್ಲಿ (2025ರದ್ದು) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ಕಮ್ ಟ್ಯಾಕ್ಸ್ ವಿಚಾರದಲ್ಲಿ ಭರಪೂರ ಕೊಡುಗೆಗಳನ್ನು ಜನಸಾಮಾನ್ಯರಿಗೆ ಕೊಟ್ಟಿದ್ದರು. ಸ್ಲ್ಯಾಬ್ ದರಗಳು ಬದಲಾದವು, ಸರಳಗೊಂಡವು. 12 ಲಕ್ಷ ರೂ ಆದಾಯ ಇದ್ದವರಿಗೆ ಟ್ಯಾಕ್ಸ್ ಮನ್ನಾ ಮಾಡಲಾಯಿತು. 75,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ಒಳಗೊಂಡರೆ 12,75,000 ರೂ ವಾರ್ಷಿಕ ಆದಾಯ ಇರುವವರು ಇನ್ಕಮ್ ಟ್ಯಾಕ್ಸ್ ಬಾಧ್ಯತೆಯನ್ನೇ ಹೊಂದಿರುವುದಿಲ್ಲ.
ಇದನ್ನೂ ಓದಿ: ಕೇಂದ್ರ ಬಜೆಟ್ | ಈ ಬಾರಿ ಬಜೆಟ್‌ನಲ್ಲಿ ಹೆಲ್ತ್‌ಕೇರ್‌ಗೆ ಸಂಬಂಧಿಸಿದ ನಿರೀಕ್ಷೆಗಳೇನು?
ಭಾರತದಲ್ಲಿ ಹೆಚ್ಚಿನ ಆದಾಯ ತೆರಿಗೆ ಪಾವತಿದಾರರ ವಾರ್ಷಿಕ ಆದಾಯ 12.75 ಲಕ್ಷ ರೂ ಮಿತಿಯೊಳಗೆಯೇ ಇದೆ. ಹೀಗಾಗಿ, ಕಳೆದ ಬಾರಿಯ ಬಜೆಟ್ನಿಂದ ಕೋಟ್ಯಂತರ ಜನರು ಟ್ಯಾಕ್ಸ್ ರಿಲೀಫ್ ಪಡೆದಿದ್ದರು. ಆದರೆ, ಈ ಟ್ಯಾಕ್ಸ್ ರಿಲೀಫ್ ಕೊಡಲಾಗಿದ್ದು ಹೊಸ ಟ್ಯಾಕ್ಸ್ ರೆಜೀಮ್ನಲ್ಲಿ ಮಾತ್ರ. ಹಳೆಯ ಟ್ಯಾಕ್ಸ್ ರೆಜಿಮ್ ಹಾಗೆಯೇ ಇದೆ. ಇದು ಗೊಂದಲ ತಂದಿರುವ ಸಂಗತಿ.
ಈ ಬಾರಿಯ ಬಜೆಟ್‌ನಲ್ಲಿ ಹಳೆಯ ಟ್ಯಾಕ್ಸ್ ರೆಜಿಮ್ ವಿಚಾರದಲ್ಲಿ ಇರುವ ಗೊಂದಲವನ್ನು ನಿವಾರಿಸುವ ಪ್ರಯತ್ನವಾಗುತ್ತಾ ಎಂಬುದು ಪ್ರಶ್ನೆಯಾಗಿದೆ. ಹೊಸ ಟ್ಯಾಕ್ಸ್ ರೆಜೀಮ್ನಲ್ಲಿ ಸಿಕ್ಕಾಪಟ್ಟೆ ಟ್ಯಾಕ್ಸ್ ರಿಲೀಫ್ ಕೊಡಲಾಗಿದ್ದರೂ, ಹಳೆಯ ಟ್ಯಾಕ್ಸ್ ರೆಜಿಮ್ನ ಆಕರ್ಷಣೆ ಉಳಿದಿರುವುದು ಅದರ ಡಿಡಕ್ಷನ್ ಅವಕಾಶವಿದೆ.



