January 30, 2026
Friday, January 30, 2026
spot_img

ಬರೋಬ್ಬರಿ 1.80 ಲಕ್ಷ ಗಾಂಜಾ ಗಿಡಗಳನ್ನು ನಾಶಪಡಿಸಿದ ಭದ್ರತಾ ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತ್ರಿಪುರದ ಸೋನಮುರಾ ಉಪವಿಭಾಗದ ಸಂರಕ್ಷಿತ ಅರಣ್ಯ ಭೂಮಿಯಲ್ಲಿ ಬೆಳೆದಿದ್ದ ಬರೋಬ್ಬರಿ 1.80 ಲಕ್ಷ ಗಾಂಜಾ ಗಿಡಗಳನ್ನು ಭದ್ರತಾ ಪಡೆಗಳು ನಾಶಪಡಿಸಿವೆ.

ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ 65 ಎಕರೆಯಲ್ಲಿ ಗಾಂಜಾ ಗಿಡಗಳನ್ನು ಬೆಳೆಯಲಾಗಿತ್ತು. ಕಮಲಾನಗರ, ಕೃಷ್ಣಡೋಲಾ, ದುಲುಂಗಾ ಮತ್ತು ಬಿಜೋಯ್ ನಗರಗಳ ಅರಣ್ಯ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಭದ್ರತಾ ಪಡೆಗಳು ದಾಳಿ ನಡೆಸಿವೆ.

ಈ ವೇಳೆ 1.80 ಲಕ್ಷ ಪ್ರೌಢ ವ್ಯವಸ್ಥೆ ಗಾಂಜಾ ಸಸಿಗಳು ಪತ್ತೆಯಾಗಿದ್ದು ಅವುಗಳನ್ನು ನಾಶಪಡಿಸಲಾಗಿದೆ. ನಾಶಪಡಿಸಲಾದ ಗಾಂಜಾದ ಮೌಲ್ಯ 27 ಕೋಟಿ ರೂ. ಮೌಲ್ಯದ್ದು ಎಂದು ಅಂದಾಜಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !