ಚಳಿಗಾಲ ಬಂತು ಅಂದ್ರೆ ಸಾಕು ಮನೆಗೆ ಅವರೆಕಾಳು ಖಂಡಿತ ಬರುತ್ತೆ. ಸೊಗಸಾದ ಪರಿಮಳ, ಸ್ವಲ್ಪ ಕಹಿ–ಸ್ವಲ್ಪ ಸಿಹಿ ರುಚಿ… ಬಿಸಿ ಬಿಸಿ ಅನ್ನ, ರಾಗಿ ಮುದ್ದೆ ಅಥವಾ ಚಪಾತಿಗೆ ಅವರೆಕಾಳು ಪಲ್ಯ ಪರ್ಫೆಕ್ಟ್ ಕಾಂಬಿನೇಷನ್.
ಬೇಕಾಗುವ ಸಾಮಗ್ರಿಗಳು
ಅವರೆಕಾಳು – 1 ಕಪ್ (ಸಿಪ್ಪೆ ತೆಗಿದದ್ದು)
ಈರುಳ್ಳಿ – 1 (ಸಣ್ಣಗೆ ಕತ್ತರಿಸಿದ್ದು)
ಹಸಿಮೆಣಸು – 1–2
ಕರಿಬೇವು – ಸ್ವಲ್ಪ
ಸಾಸಿವೆ – ½ ಚಮಚ
ಉದ್ದಿನಬೇಳೆ – ½ ಚಮಚ
ಅರಿಶಿನ – ¼ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ತೆಂಗಿನ ತುರಿ – 2 ಟೇಬಲ್ ಸ್ಪೂನ್
ಎಣ್ಣೆ – 2 ಟೀಸ್ಪೂನ್
ಮಾಡುವ ವಿಧಾನ
ಮೊದಲು ಅವರೆಕಾಳನ್ನು ಸ್ವಲ್ಪ ಉಪ್ಪು ಹಾಕಿ ಕುಕ್ಕರ್‌ನಲ್ಲಿ 1 ಸೀಟಿ ಬರುವವರೆಗೆ ಬೇಯಿಸಿ. ನಂತರ ನೀರು ತೆಗೆದಿಡಿ.
ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಕಿ ಸಿಡಿಸಿದ ಮೇಲೆ ಉದ್ದಿನಬೇಳೆ, ಕರಿಬೇವು, ಹಸಿಮೆಣಸು ಹಾಕಿ. ಈಗ ಈರುಳ್ಳಿ ಸೇರಿಸಿ ಸ್ವಲ್ಪ ಗೋಲ್ಡನ್ ಕಲರ್ ಬರುವವರೆಗೆ ಹುರಿಯಿರಿ.
ಅದಕ್ಕೆ ಅರಿಶಿನ ಹಾಕಿ, ಬೇಯಿಸಿದ ಅವರೆಕಾಳು ಸೇರಿಸಿ ಚೆನ್ನಾಗಿ ಕಲಸಿ. ಉಪ್ಪು ಹಾಕಿ 3–4 ನಿಮಿಷ ಸಣ್ಣ ಬೆಂಕಿಯಲ್ಲಿ ಬೇಯಿಸಿ. ಕೊನೆಗೆ ತೆಂಗಿನ ತುರಿ ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ.



