January 30, 2026
Friday, January 30, 2026
spot_img

ಗುರುಗ್ರಾಮದ ಹೊಟೇಲ್ ಬಾತ್‌ರೂಮ್‌ನಲ್ಲಿ ಬೆಂಗಳೂರು ಮೂಲದ ಟೆಕ್ಕಿ ಶವ ಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರಿಯಾಣದ ಗುರುಗ್ರಾಮದ ಹೊಟೇಲ್ ಬಾತ್‌ರೂಮ್‌ನಲ್ಲಿ ಬೆಂಗಳೂರು ಮೂಲದ ಟೆಕ್ಕಿಯೊಬ್ಬರ ಶವ ಪತ್ತೆಯಾಗಿದೆ.

ಮೃತರನ್ನು ವಿಜಯ್ ಸರೂಪ್ (38) ಎಂದು ಗುರುತಿಸಲಾಗಿದೆ. ಮೂರು ದಿನಗಳ ಹಿಂದೆ ಅವರು ತಮ್ಮ ಕಂಪನಿಯ 9 ಮಂದಿ ಸಹೋದ್ಯೋಗಿಗಳೊಂದಿಗೆ ಗುರುಗ್ರಾಮಕ್ಕೆ ಬಂದಿದ್ದರು.

ಎಲ್ಲಾ ಉದ್ಯೋಗಿಗಳಿಗೆ ಪ್ರತ್ಯೇಕ ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು. ಕೆಲವರು ಬುಧವಾರ ಅಲ್ಲಿಂದ ಹೊರಟುಹೋಗಿದ್ದರು. ಸರೂಪ್ ಸೇರಿದಂತೆ ಇತರರು ಹೊಟೇಲ್ ನಲ್ಲಿಯೇ ಉಳಿದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸರೂಪ್ ಗುರುವಾರ ಮಧ್ಯಾಹ್ನ ಹೊರಗೆ ಹೋಗಬೇಕಿತ್ತು. ಆದರೆ ಅವರ ರೂಮ್‌ ಬಳಿ ಕರೆದಾಗ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ ಹೊಟೇಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಪರಿಶೀಲಿಸಿದಾಗ ಅವರ ಶವ ಬಾತ್ರೂಮ್ ಕಮೋಡ್‌ ಬಳಿ ಬಿದ್ದಿರುವುದು ಗೊತ್ತಾಗಿತ್ತು. ಪೊಲೀಸರು ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !