ಹೊಸ ದಿಗಂತ ವರದಿ,ಯಲ್ಲಾಪುರ: :
ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಇಲಾಖೆಯವರು ತಾಲೂಕಿನ ಕಣ್ಣಿಗೇರಿ ಬಳಿ ವಶಕ್ಕೆ ಪಡೆದ ಘಟನೆ ನಡೆದಿದೆ.
ಶುಕ್ರವಾರ ಸಂಜೆ ನವೀನ ಶಾಂತಾರಾಮ ಶೇಟ್ ಎಂಬಾತನು ದ್ವಿಚಕ್ರ ವಾಹನದಲ್ಲಿ ಹಳಿಯಾಳ ದಿಂದ ಯಲ್ಲಾಪುರ ಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ತಾಲೂಕಿನ ಕಣ್ಣಿಗೇರಿ ಗ್ರಾಮದ ಬಳಿ ಅಬಕಾರಿ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿ ವಾಹನ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಕೆಂಪು ಬಣ್ಣದ ಚೀಲದಲ್ಲಿ ಅನಧೀಕೃತವಾಗಿ 90 ಗ್ರಾಮ್ ಒಣ ಗಾಂಜಾ ಸೊಪ್ಪು ಮಾದಕ ವಸ್ತುವನ್ನು ಮಾರಾಟಕ್ಕಾಗಿ ಹಳಿಯಾಳ ಪಟ್ಟಣದ ಮೂಲಕ ಯಲ್ಲಾಪುರ ಪಟ್ಟಣಕ್ಕೆ ಸಾಗಿಸುತ್ತಿದ್ದ ಆರೋಪಿತನನ್ನು ಸ್ಥಳದಲ್ಲಿಯೇ ದಸ್ತಗಿರಿ ಮಾಡಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.ಜಪ್ತುಪಡಿಸಿದ ಗಾಂಜಾದ ಅಂದಾಜು ಮೌಲ್ಯ ರೂ. 2500/- ಗಳಾಗಿರುತ್ತದೆ. ದ್ವಿಚಕ್ರ ವಾಹನದ ಅಂದಾಜು ಮೌಲ್ಯ ರೂ.125000/- ಎಂದು ಅಂದಾಜಿಸಲಾಗಿದೆ.

ಯಲ್ಲಾಪುರ ಅಬಕಾರಿ ಉಪ ಅಧೀಕ್ಷಕ ಶ್ರೀಶೈಲ್ ಅವಜಿ, ಮಾರ್ಗ ದರ್ಶನ ದಲ್ಲಿ ಯಲ್ಲಾಪುರ ವಲಯದ ಅಬಕಾರಿ ನಿರೀಕ್ಷಕ ಮಹೇಂದ್ರ ಎಸ್ ನಾಯ್ಕ, . ಸಿದ್ಧಾರೂಢ ಭೀ. ಬನಸೋಡೆ,ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ಯಲ್ಲಿದ್ದರು.ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.



