ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಾಳೆ ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ 2026-27 ನೇ ಸಾಲಿನ ಕೇಂದ್ರದ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ.
ಜನಸಾಮಾನ್ಯರಿಂದ ಹಿಡಿದು ಉದ್ಯಮಿಗಳವರೆಗೆ ನಿರೀಕ್ಷೆಗಳು ಹೆಚ್ಚಿವೆ. ಜನಸಾಮಾನ್ಯರಿಗೆ ಹಲವು ಪ್ರಮುಖ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಬಜೆಟ್‌ನಲ್ಲಿ ಒಂದಿಷ್ಟು ದೊಡ್ಡ ಘೋಷಣೆಗಳು ಇರಬಹುದು ಎಂದು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.
- ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿರುವ 12 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿಗೆ ಏರಿಸುವ ನಿರೀಕ್ಷೆ
- ವಿವಾಹಿತ ಜೋಡಿಗೆ ಜಂಟಿ ತೆರಿಗೆ ಪದ್ದತಿಯನ್ನ ಜಾರಿಗೆ ತರಬಹುದು
- ಸೆಕ್ಷನ್ 24(ಬಿ) ಅಡಿಯಲ್ಲಿ ಗೃಹ ಸಾಲದ ಕಡಿತ
- MSME ಗಳ ಉತ್ಪಾದನೆ, ಮೂಲಸೌಕರ್ಯಗಳಿಗೆ ಒತ್ತು
- ದೀರ್ಘಾವಧಿಯ ಉಳಿತಾಯ ಪ್ರೋತ್ಸಾಹ ಕ್ರಮಗಳು
- ರಸ್ತೆ, ರೈಲು, ವಸತಿ, ನಗರಾಭಿವೃದ್ಧಿಗೆ ಬಂಡವಾಳ ಹೂಡಿಕೆ
- ಡಿಜಿಟಲ್ ಆರ್ಥಿಕತೆ, ಎಐ ಮತ್ತು ಡೀಪ್ ಟೆಕ್ನಾಲಜಿಗೆ ಹೊಸ ಪಾಲಿಸಿ
- ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ನು ಶೇ.5 ಕ್ಕೆ ಇಳಿಕೆ, ಎಲ್‌ಟಿಸಿಜಿ ಶೇ.0 ಕ್ಕೆ ಇಳಿಕೆ
- ಮ್ಯೂಚ್ಯುಯಲ್ ಫಂಡ್ ಗಳನ್ನು 5-7 ವರ್ಷದವರೆಗೆ ಹೊಂದಿದ್ದರೇ, ಯಾವುದೇ ತೆರಿಗೆ ಇಲ್ಲ
- ಜಿಎಸ್‌ಟಿ 2.0 ಜಾರಿಯಲ್ಲಿದ್ದು, ಇದರಲ್ಲಿ ಇನ್ನಷ್ಟು ಬದಲಾವಣೆ ಸಾಧ್ಯತೆ
- ಕಸ್ಟಮ್ಸ್ ಲಿಟಿಗೇಷನ್ ಮತ್ತು ಸುಂಕ ಪದ್ದತಿಯಲ್ಲಿ ಬದಲಾವಣೆ ನಿರೀಕ್ಷೆ
- ಕಸ್ಟಮ್ಸ್ ಸುಂಕ ಪದ್ದತಿಯನ್ನ ಪರಿಷ್ಕರಣೆ ಮಾಡಬಹುದೆಂಬ ನಿರೀಕ್ಷೆ
- ಕಸ್ಟಮ್ಸ್ ಲಿಟಿಗೇಷನ್ ಇತ್ಯರ್ಥಕ್ಕೆ 1 ಬಾರಿ ಸೆಟ್ಲ್ಮೆಂಟ್ ಸ್ಕೀಮ್ ಸಾಧ್ಯತೆ
- ಚಿನ್ನಾಭರಣ ಖರೀದಿಗೆ ಪ್ಯಾನ್ ಮಿತಿಯಲ್ಲಿ ಬದಲಾವಣೆ ಸಾಧ್ಯತೆ
- ಸದ್ಯಕ್ಕೆ 2 ಲಕ್ಷವರೆಗೆ ಆಭರಣ ಖರೀದಿಗೆ ಪ್ಯಾನ್ ಬೇಕಾಗಿಲ್ಲ
- ಆಭರಣ ಕ್ಷೇತ್ರಕ್ಕೆ ವಿಶೇಷ ರಿಯಾಯಿತಿ ನೀಡಬಹುದು
- ಪ್ರಸ್ತುತ ಚಿನ್ನದ ಆಮದು ಸುಂಕ ಇನ್ನಷ್ಟು ಇಳಿಕೆ ನಿರೀಕ್ಷೆ
- ಆಭರಣಗಳ ಮೇಲೆ ಇರುವ ಶೇ.3 ರಷ್ಟು ಜಿಎಸ್‌ಟಿ ದರ 1.25ಕ್ಕೆ ಇಳಿಕೆ ಸಾಧ್ಯತೆ
- ಹಿರಿಯ ನಾಗರಿಕರಿಗೆ ಐಟಿ ಕಾಯ್ದೆಯ ಸೆಕ್ಷನ್ 80 ಅಡಿಯಲ್ಲಿ ಇನ್ನಷ್ಟು ವಿನಾಯ್ತಿ
- ಬ್ಯಾಂಕ್, ಪೋಸ್ಟ್ ಆಫೀಸ್‌ನಲ್ಲಿನ ಠೇವಣಿಗಳ ಮೇಲಿನ ಬಡ್ಡಿಗೆ ಸದ್ಯ 50,000 ವರೆಗೆ ಕಡಿತ
- 3 ಲಕ್ಷ ರೂ. ವರೆಗಿನ ತೆರಿಗೆ ವಿನಾಯ್ತಿಯನ್ನು ಹೆಚ್ಚಿಸಬಹುದು
- ರೊಯೋಟಿಕ್ಸ್, ರೇಡಿಯೋ ಥೆರಪಿಯಂಥ ಸುಧಾರಿತ ಉಪಕರಣ ಮೇಲಿನ ಸೀಮಾ ಸುಂಕ ಕಡಿಮೆ
- ಔಷಧ ತಯಾರಿಕಾ ವಲಯಕ್ಕೆ ಹೆಚ್ಚಿನ ಬೆಂಬಲ ಸಿಗುವ ನಿರೀಕ್ಷೆ
- ಐವಿಎಫ್, ಸಹಾಯಕ ತಂತ್ರಜ್ಞಾನಗಳಿಗೆ ಸಬ್ಸಿಡಿ; ತೆರಿಗೆ ರಿಲೀಫ್
- ಪಿಎಂ ಕಿಸಾನ್ ಯೋಜನೆಯಡಿ ನೀಡಲಾಗುವ 6000 ರೂ.ಅನ್ನು 9000 ರೂ.ವರೆಗೆ ಏರಿಸುವ ನಿರೀಕ್ಷೆ
- ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ಸಾಲದ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಸಾಧ್ಯತೆ
- 2047ರ ವಿಕಸಿತ ಭಾರತದ ದೃಷ್ಟಿಕೋನದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು
- ಸ್ಟಾರ್ಟ್ ಅಪ್‌ಗಳು ಮತ್ತು ಐಟಿ ಕಂಪನಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಬಹುದು
- ಮುದ್ರಾಂಕ ಶುಲ್ಕಗಳು ಕಡಿಮೆ ಮಾಡುವ ನಿರೀಕ್ಷೆ
- ಆರೋಗ್ಯ ಮತ್ತು ಜೀವ ವಿಮೆಗೆ ಸಂಬಂಧಿಸಿದಂತೆ ಸುಧಾರಣೆ ಘೋಷಿಸಬಹುದು



