ಹೊಸ ದಿಗಂತ ವರದಿ,ಯಲ್ಲಾಪುರ:
ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ನಲ್ಲಿ ಎಥನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ನಡೆದಿದೆ.
ಅರಬೈಲ್ ಘಾಟ್ ನಲ್ಲಿ ಎಸ್ ಆಕಾರದ ತಿರುವಿನ ಸಮೀಪ ಟ್ಯಾಂಕರ್ ಚಾಲಕ ಅತಿವೇಗ ಹಾಗೂ ನಿರ್ಲಕ್ಷ ತನದಿಂದ ಟ್ಯಾಂಕರ್ ಚಲಾಯಿಸಿಕೊಂಡು ಬಂದು ಡಿವೈಡರಿಗೆ ಡಿಕ್ಕಿಯಾದ ಪರಿಣಾಮ ಬೆಂಕಿ ಹೊತ್ತಿಕೊಂಡು ಉರಿದಿದೆ. ಲಾರಿ ಮಾಲಕನಿಗೆ ಹಾನಿಯಾಗಿದೆ. ಚಾಲಕ ಮೇಲೆ ದೂರು ದಾಖಲಿಸಿದ್ದಾರೆ.
ಆರೋಪಿ ವಿಜಯಪುರದ ಶಿವಾನಂದ ಬಿರಾದರ್ ಜನವರಿ 29ರಂದು ತಡರಾತ್ರಿ 2.30ಕ್ಕೆ ನಿದ್ದೆಯ ಮಂಪರಿನಲ್ಲಿ ಅಪಘಾತಕ್ಕಿಡಾಗಿ ಲಾರಿ ಪಲ್ಟಿಯಾಗಿದ್ದು ಅದರಲ್ಲಿದ್ದ ಎಥನಾಲ್’ಗೆ ಬೆಂಕಿ ಹೊತ್ತಿಕೊಂಡು ಲಾರಿ ಸುಟ್ಟು ಹೋಗಿದೆ.
ಬೆಳಗಾವಿಯ ಲಾರಿ ಮಾಲಕ ಬನಪ್ಪ ಅಸ್ಕಿ ಎಥನಾಲ್ ಕಂಪನಿಯವರ ಜೊತೆ ಚರ್ಚಿಸಿದ ನಂತರ ಶನಿವಾರ ಚಾಲಕನ ವಿರುದ್ಧ ದೂರು ನೀಡಿದ್ದಾರೆ. ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.



