ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವರ್ಷದ ಬಜೆಟ್‌ನಲ್ಲಿ ವಿಶೇಷ ಆದ್ಯತೆ ಪಡೆದಿದ್ದ ಬಿಹಾರ ರಾಜ್ಯವು, ಈ ಬಾರಿಯೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮುಂದೆ ದೊಡ್ಡ ಬೇಡಿಕೆಗಳ ಪಟ್ಟಿಯನ್ನೇ ಇಟ್ಟಿದೆ. ಈ ಕುರಿತು ಬಿಹಾರ ವಾಣಿಜ್ಯ ಮಂಡಳಿಯು ಕೇಂದ್ರಕ್ಕೆ ಪ್ರಮುಖ ಸಲಹೆಗಳನ್ನು ನೀಡಿದೆ.
ಬಿಹಾರದ ಪ್ರಮುಖ ಬೇಡಿಕೆಗಳು:
ಕೈಗಾರಿಕಾ ಪ್ರಗತಿ: ರಾಜ್ಯದ ಕೈಗಾರಿಕಾ ವಲಯದ ಬೆಳವಣಿಗೆಗೆ ಹೆಚ್ಚಿನ ಧನಸಹಾಯದ ಅಗತ್ಯವಿದೆ.
ಯೋಜನೆಗಳಿಗೆ ಅನುದಾನ: ವಿವಿಧ ರಾಜ್ಯ ಸರ್ಕಾರಿ ಯೋಜನೆಗಳಿಗೆ ಕೇಂದ್ರದಿಂದ ಹೆಚ್ಚಿನ ಹಂಚಿಕೆಯನ್ನು ನಿರೀಕ್ಷಿಸಲಾಗಿದೆ.
ಸಕ್ಕರೆ ಕಾರ್ಖಾನೆಗಳ ಪುನಶ್ಚೇತನ: ಮುಚ್ಚಿಹೋಗಿರುವ ಹಳೆಯ ಸಕ್ಕರೆ ಕಾರ್ಖಾನೆಗಳನ್ನು ಮತ್ತೆ ಆರಂಭಿಸಲು ವಿಶೇಷ ಪ್ಯಾಕೇಜ್ ಬೇಕೆಂದು ಮಂಡಳಿ ಒತ್ತಾಯಿಸಿದೆ.
ಹೈಟೆಕ್ ಹಬ್‌ಗಳು: ರಾಜ್ಯದಲ್ಲಿ ಸೆಮಿಕಂಡಕ್ಟರ್ ಹಬ್‌ಗಳು ಮತ್ತು ಬೃಹತ್ ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸುವ ಮೂಲಕ ಉದ್ಯೋಗಾವಕಾಶ ಸೃಷ್ಟಿಸುವುದು.



