ಹೊಸದಿಗಂತ ಡಿಜಿಟಲ್ ಡೆಸ್ಕ್:
2026-27ನೇ ಸಾಲಿನ ಬಜೆಟ್ ಮಂಡನೆಗೆ ನಿರ್ಮಲಾ ಸೀತಾರಾಮನ್ ಸಜ್ಜಾಗಿದ್ದಾರೆ. ಈ ಬಾರಿ ಬಜೆಟ್ನಲ್ಲಿ ಮೊದಲ ಬಾರಿಗೆ ಬಜೆಟ್ ʼಬಿʼ ಭಾಗದಲ್ಲಿ ಎಂದಿನ ತೆರಿಗೆ ನೀತಿಗಳ ಜೊತೆಗೆ ಮೊದಲ ಬಾರಿಗೆ ಆರ್ಥಿಕ ನಿರ್ದೇಶನ ಮತ್ತು ನೀತಿ ಸುಧಾರಣೆಗಳಿಗೆ ಒತ್ತು ನೀಡಲಾಗುತ್ತಿದೆ. ಈ ಮೂಲಕ ಬೆಳವಣಿಗೆಯ ಆದ್ಯತೆಗಳು ಮತ್ತು ಬದಲಾಗುತ್ತಿರುವ ಜಾಗತಿಕ ಆರ್ಥಿಕತೆಯಲ್ಲಿ ದೇಶ ಬೆಳವಣಿಗೆಯ ಪಾತ್ರದ ಕುರಿತು ದಿಕ್ಸೂಚಿಯನ್ನು ಹಂಚಿಕೊಳ್ಳುತ್ತದೆ.
ಸಾಮಾನ್ಯವಾಗಿ ಕೇಂದ್ರ ಬಜೆಟ್ ಅನ್ನು ಎ ಮತ್ತು ಬಿಯಾಗಿ ಬಜೆಟ್ ವಿಂಗಡಿಸಲಾಗಿದೆ. ಬಜೆಟ್‌ನ ಎರಡನೇ ಭಾಗವು ತೆರಿಗೆ ಪ್ರಸ್ತಾವನೆಗಳು ಮತ್ತು ಆಯ್ದ ನವೀಕರಣಗಳ ಮೇಲೆ ಕೇಂದ್ರೀಕರಿಸಿದ ಸಣ್ಣ ವಿಭಾಗವಾಗಿ ಕಾರ್ಯನಿರ್ವಹಿಸಿದರೆ, ಮೊದಲ ಭಾಗವಾದ ಎ ವಿಭಾಗದಲ್ಲಿ ಹೆಚ್ಚಿನ ವಿವರವಾದ ನೀತಿ ಪ್ರಕಟಣೆಗಳನ್ನು ಹೊಂದಿರುತ್ತದೆ.
ಈ ಬಾರಿ ಬಜೆಟ್ನೊಂದಿಗೆ ಸರ್ಕಾರವು ಹಣಕಾಸು ಸಚಿವರ ಭಾಷಣದ ರಚನೆಯನ್ನು ಪರಿಷ್ಕರಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಾರಿ ಬಜೆಟ್ನಲ್ಲಿ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್, ಬಜೆಟ್ ಬಿ ಭಾಗದಲ್ಲಿ ಆರ್ಥಿಕ ಬೆಳವಣಿಗೆಯ ವಿವರಗಳನ್ನು ನೀಡುವ ಸಾಧ್ಯತೆ ಇದೆ. ಇದು ಕೇವಲ ತೆರಿಗೆಯ ನೀತಿಯಾಗಿರದೇ, ದೇಶದ ಆರ್ಥಿಕ ದಿಕ್ಕಿನ ಕುರಿತು ಹೇಳಿಕೆಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಅಧಿಕಾರಿಗಳ ಪ್ರಕಾರ, ಭಾಗ ಬಿ ತಕ್ಷಣದ ಆರ್ಥಿಕ ಸ್ಥಿರತೆಯನ್ನು ಗುರಿಯಾಗಿಸಿಕೊಂಡು ಅಲ್ಪಾವಧಿಯ ಆದ್ಯತೆ ಮತ್ತು ದೇಶದ ಬೆಳವಣಿಗೆಯ ಮಾರ್ಗವನ್ನು ರೂಪಿಸುವ ದೀರ್ಘಾವಧಿಯ ಉದ್ದೇಶ ಹೊಂದಲಾಗಿದೆ. ಇದು ಜಾಗತಿಕ ವೇದಿಕೆಯಲ್ಲಿ ದೇಶದ ಸ್ಥಳೀಯ ಸಾಮರ್ಥ್ಯಗಳ ಪ್ರದರ್ಶನದ ಮಾರ್ಗಸೂಚಿ ಜೊತೆಗೆ ದೇಶವು ಸ್ಪರ್ಧಾತ್ಮಕ ಅನುಕೂಲತೆಗಳನ್ನು ಹೊಂದಿರುವ ಕ್ಷೇತ್ರಗಳನ್ನು ಎತ್ತಿ ತೋರಿಸುತ್ತದೆ. ಹಾಗೇ ಅನಿರೀಕ್ಷಿತ ವಲಯಗಳ ಪ್ರದರ್ಶನ ನಡೆಯಲಿದೆ.
ಈ ವರ್ಷ – ರಕ್ಷಣೆ, ಮೂಲಸೌಕರ್ಯ, ಬಂಡವಾಳ ಹೂಡಿಕೆ, ವಿದ್ಯುತ್ ಮತ್ತು ಕೈಗೆಟುಕುವ ವಸತಿ ಕ್ಷೇತ್ರದಲ್ಲಿ ಹೆಚ್ಚಿನ ಬೆಳವಣಿಗೆಯ ಮೇಲೆ ಒತ್ತು ನೀಡುವ ಸಾಧ್ಯತೆಗಳಿವೆ. ಜೊತೆಗೆ ಸಾಮಾಜಿಕ ಕಲ್ಯಾಣವನ್ನು ಹಣಕಾಸಿನ ವಿವೇಕದೊಂದಿಗೆ ಸಮತೋಲನಗೊಳಿಸುವ ಸಾಧ್ಯತೆ ಇದೆ. ಇದಲ್ಲದೇ, ಜಾಗತಿಕ ಅನಿಶ್ಚಿತತೆಯ ನಡುವೆಯೂ ನೀತಿ ನಿರೂಪಕರು ಬೆಳವಣಿಗೆಯ ಆದ್ಯತೆಗಳನ್ನು ಹಣಕಾಸಿನ ಶಿಸ್ತಿನೊಂದಿಗೆ ಸಮತೋಲನಗೊಳಿಸುತ್ತಾರೆ.



