February 1, 2026
Sunday, February 1, 2026
spot_img

ಅಕ್ರಮ ‘ಕೋಳಿ ಕಟ್ಟ’ಕ್ಕೆ ಪೊಲೀಸ್ ದಾಳಿ: ಖಾಕಿ ಪಡೆ ಹೆಜ್ಜೆಗೆ ಅಂಕದಲ್ಲಿದ್ದವರು ಗಾಯಬ್!

ಹೊಸದಿಗಂತ ವರದಿ ದಕ್ಷಿಣ ಕನ್ನಡ:

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ.

ಉಬರಡ್ಕ ಗ್ರಾಮದ ಮದಕ ಎಂಬಲ್ಲಿ ರಬ್ಬರ್ ತೋಟದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಮಾಹಿತಿ ಹಿನ್ನಲೆಯಲ್ಲಿ ಸುಳ್ಯ ಪಿಎಸ್ ಐ ಸರಸ್ವತಿ ಹಾಗೂ ಎಎಸ್ಐ ತಾರನಾಥ್ ಮತ್ತು ಸಿಬ್ಬಂದಿಗಳು ಅಕ್ರಮ ಕೋಳಿ ಅಂಕ ಸ್ಥಳಕ್ಕೆ ಧಾಳಿ ನಡೆಸಿದ್ದು ಪೋಲಿಸರು ಒಂದು ಬೈಕ್ ಹಾಗೂ ನಾಲ್ಕು ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಬರುವಿಕೆ ತಿಳಿದು ಅಂಕದಲ್ಲಿದ್ದವರು ಕಾಲ್ಕಿತ್ತಿದ್ದು ಸ್ಥಳದಲ್ಲಿ ಸಿಕ್ಕ ಕೋಳಿ ಮತ್ತು ಬೈಕ್ ವಶಪಡಿಸಿಕೊಂಡು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !