ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಒಂಬತ್ತನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ವೇಳೆ ಡಾಂಕುಣಿಯಿಂದ ಸೂರತ್ವರೆಗೂ ಸರಕು ಸಾಗಣೆ ಕಾರಿಡಾರ್ ಸ್ಥಾಪನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಡಾಂಕುಣಿಯಿಂದ ಸೂರತ್ವರೆಗೂ ಸರಕು ಸಾಗಣೆ ಕಾರಿಡಾರ್, ಪರಿಸರ ಸ್ನೇಹಿ ಸರಕು ಸಾಗಣೆ ಉತ್ತೇಜಿಸಲು ಹೊಸ ಯೋಜನೆ ಹಾಗೂ 5 ವರ್ಷಗಳಲ್ಲಿ 20 ಹೊಸ ರಾಷ್ಟ್ರೀಯ ಜಲಮಾರ್ಗ ಘೋಷಣೆ ಮಾಡಲಾಗಿದೆ.
ಬಂಡವಾಳ ಹೂಡಿಕೆಗೆ ಅನಿವಾಸಿ ಭಾರತೀಯರಿಗೂ ಅವಕಾಶ ನೀಡಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗೆ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗಿದೆ.



