February 1, 2026
Sunday, February 1, 2026
spot_img

ಕೊಟ್ಟ ಮಾತು ಉಳಿಸಿಕೊಂಡ ಸೀತಾರಾಮನ್: 4.5% ಗಿಂತ ಕೆಳಕ್ಕೆ ಇಳಿಯಲಿದೆ ವಿತ್ತೀಯ ಕೊರತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ದೇಶದ ಆರ್ಥಿಕ ಸದೃಢತೆಯ ಕುರಿತು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. 2026-27ನೇ ಹಣಕಾಸು ವರ್ಷಕ್ಕೆ (FY27) ಭಾರತದ ವಿತ್ತೀಯ ಕೊರತೆಯ ಗುರಿಯನ್ನು ಜಿಡಿಪಿಯ 4.3% ಕ್ಕೆ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

“2021-22ರ ಬಜೆಟ್‌ನಲ್ಲಿ ನಾನು ನೀಡಿದ್ದ ಭರವಸೆಯಂತೆ, ದೇಶದ ವಿತ್ತೀಯ ಕೊರತೆಯನ್ನು 4.5% ಕ್ಕಿಂತ ಕೆಳಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೇನೆ,” ಎಂದು ಸಚಿವರು ಹೆಮ್ಮೆಯಿಂದ ಹೇಳಿದ್ದಾರೆ.

ಭಾರತದ ಒಟ್ಟು ಸಾಲ ಮತ್ತು ಜಿಡಿಪಿ ಅನುಪಾತವು ಗಮನಾರ್ಹವಾಗಿ ಇಳಿಕೆಯಾಗುವ ನಿರೀಕ್ಷೆಯಿದೆ. 2025-26ರಲ್ಲಿ ಶೇ. 56.1 ರಷ್ಟಿದ್ದ ಈ ಅನುಪಾತವು, 2026-27ರ ವೇಳೆಗೆ ಶೇ. 55.6 ಕ್ಕೆ ತಗ್ಗಲಿದೆ ಎಂದು ಅಂದಾಜಿಸಲಾಗಿದೆ.

ಈ ಕ್ರಮಗಳು ಭಾರತದ ಆರ್ಥಿಕತೆಯನ್ನು ಮತ್ತಷ್ಟು ಸ್ಥಿರಗೊಳಿಸುವ ಮತ್ತು ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !