ಹೊಸದಿಗಂತ ಡಿಜಿಟಲ್ ಡೆಸ್ಕ್:
ಫ್ಯೂಚರ್ ಆಂಡ್ ಆಪ್ಶನ್ (F&O) ವಹಿವಾಟಿನ ಮೇಲಿನ ಭದ್ರತಾ ವಹಿವಾಟು ತೆರಿಗೆಯನ್ನು ಕೇಂದ್ರ ಸರ್ಕಾರವು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಈ ಮೊದಲು ಶೇ. 0.02 ರಷ್ಟಿದ್ದ ತೆರಿಗೆಯನ್ನು ಶೇ. 0.05 ಕ್ಕೆ ಹೆಚ್ಚಳ ಮಾಡಿ ಘೋಷಣೆ ಹೊರಡಿಸಿದ ಬೆನ್ನಲ್ಲೇ ಷೇರು ಮಾರುಕಟ್ಟೆ ನಲುಗಿ ಹೋಗಿದೆ.
ಈ ಅನಿರೀಕ್ಷಿತ ತೆರಿಗೆ ಏರಿಕೆಯಿಂದ ಕಂಗೆಟ್ಟ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಗಿಬಿದ್ದಿದ್ದರಿಂದ ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 1,500 ಅಂಕಗಳಷ್ಟು ನೆಲಕಚ್ಚಿದರೆ, ನಿಫ್ಟಿ 437 ಅಂಕಗಳಷ್ಟು ಭಾರಿ ಇಳಿಕೆ ಕಂಡಿದೆ.



