February 1, 2026
Sunday, February 1, 2026
spot_img

ಡಿಜಿಟಲ್ ಕ್ರಾಂತಿಯತ್ತ ಭಾರತ: 2030ರ ವೇಳೆಗೆ ಲಕ್ಷಾಂತರ ಯುವಕರಿಗೆ ಅನಿಮೇಷನ್ ವಲಯದಲ್ಲಿ ಉದ್ಯೋಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಅನಿಮೇಷನ್, ಗೇಮಿಂಗ್ ಮತ್ತು ಕಾಮಿಕ್ಸ್ ವಲಯಕ್ಕೆ ಹೊಸ ಚೈತನ್ಯ ನೀಡಲು ಸರ್ಕಾರ ಮಹತ್ವದ ಯೋಜನೆಯನ್ನು ರೂಪಿಸಿದೆ. 2030ರ ವೇಳೆಗೆ ಈ ಕ್ಷೇತ್ರದಲ್ಲಿ ಬರೋಬ್ಬರಿ 20 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದ್ದು, ಇದಕ್ಕೆ ಪೂರಕವಾಗಿ ಶಿಕ್ಷಣ ಹಂತದಲ್ಲೇ ತರಬೇತಿ ನೀಡಲು ನಿರ್ಧರಿಸಲಾಗಿದೆ.

ಮುಂಬೈನ ಪ್ರತಿಷ್ಠಿತ ಐಐಸಿಟಿ (IICT) ಸಂಸ್ಥೆಯ ಸಹಯೋಗದೊಂದಿಗೆ ಈ ಬೃಹತ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಬೆಳೆಸಲು ದೇಶದ 15,000 ಶಾಲೆಗಳು ಹಾಗೂ 500 ಕಾಲೇಜುಗಳಲ್ಲಿ ಅತ್ಯಾಧುನಿಕ ‘ಕಂಟೆಂಟ್ ಕ್ರಿಯೇಷನ್ ಲ್ಯಾಬ್’ಗಳನ್ನು ಸ್ಥಾಪಿಸಲಾಗುತ್ತದೆ.

ಕೇವಲ ಮನರಂಜನೆಗೆ ಸೀಮಿತವಾಗಿದ್ದ ಅನಿಮೇಷನ್ ಮತ್ತು ಗೇಮಿಂಗ್ ಅನ್ನು ಈಗ ವೃತ್ತಿಪರ ಶಿಕ್ಷಣದ ಭಾಗವಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಯುವಜನತೆಗೆ ಜಾಗತಿಕ ಮಟ್ಟದ ಅವಕಾಶಗಳು ಲಭ್ಯವಾಗಲಿವೆ.

ಈ ಕ್ರಮವು ಡಿಜಿಟಲ್ ಆರ್ಥಿಕತೆಗೆ ಬಲ ನೀಡುವುದಲ್ಲದೆ, ಭಾರತವನ್ನು ಜಾಗತಿಕ ‘ಕಂಟೆಂಟ್ ಹಬ್’ ಆಗಿ ರೂಪಿಸಲು ಸಹಕಾರಿಯಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !