ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ಮಂಡಿಸಿದ 2026–27ರ ಬಜೆಟ್ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಜೆಟ್ ಭಾಷಣದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಈ ಬಜೆಟ್ ನಿರೀಕ್ಷೆಗೂ ಬಹಳ ಕಡಿಮೆ ಮಟ್ಟದಲ್ಲಿದೆ ಎಂದು ಟೀಕಿಸಿದರು.
ದಾಖಲೆಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಬೇಕಾದ ಅಗತ್ಯವಿದ್ದರೂ, ಬಜೆಟ್ ಭಾಷಣ ಮುಗಿದ ಸುಮಾರು 90 ನಿಮಿಷಗಳಲ್ಲೇ ಒಂದು ವಿಷಯ ಸ್ಪಷ್ಟವಾಗಿದೆ. ಈ ಬಜೆಟ್ ಬಗ್ಗೆ ಸೃಷ್ಟಿಸಲಾಗಿದ್ದ ಪ್ರಚಾರಕ್ಕಿಂತ ಇದು ತುಂಬಾ ಕಡಿಮೆಯಿದೆ. ಒಟ್ಟಿನಲ್ಲಿ ಬಜೆಟ್ ಸಂಪೂರ್ಣವಾಗಿ ನೀರಸವಾಗಿದೆ, ಎಂದು ಜೈರಾಮ್ ರಮೇಶ್ ಹೇಳಿದರು.
ಪ್ರಮುಖ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಎಷ್ಟು ಅನುದಾನ ನೀಡಲಾಗಿದೆ ಎಂಬುದರ ಬಗ್ಗೆ ಬಜೆಟ್ ಭಾಷಣದಲ್ಲಿ ಸ್ಪಷ್ಟ ಮಾಹಿತಿ ಇಲ್ಲದಿರುವುದನ್ನು ಅವರು ಪ್ರಶ್ನಿಸಿದರು. “ಯಾವ ವಲಯಕ್ಕೆ ಎಷ್ಟು ಹಣ ಹಂಚಿಕೆ ಮಾಡಲಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ನೀಡದೇ ಭಾಷಣ ಮುಗಿಸಲಾಗಿದೆ. ಈ ಕಾರಣದಿಂದ ಬಜೆಟ್ ಪಾರದರ್ಶಕವಾಗಿಲ್ಲ,” ಎಂದು ಅವರು ಆರೋಪಿಸಿದರು.



