February 1, 2026
Sunday, February 1, 2026
spot_img

📊 | ಪ್ರತೀ ಬಾರಿ ಸುದೀರ್ಘವಾಗಿರುವ ಬಜೆಟ್‌ ಈ ಬಾರಿ ಶಾರ್ಟ್‌ ಆಗಿರೋದು ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

2026-27ನೇ ಸಾಲಿನ ಬಜೆಟ್​​​ನ ಮುಕ್ತಾಯವಾಗಿದೆ. ಪ್ರತೀ ಬಾರಿಯೂ ಮೂರು ಅಥವಾ ನಾಲ್ಕು ಗಂಟೆಗಳ ಸುದೀರ್ಘ ಬಜೆಟ್‌ ಮಂಡನೆಯಾಗುತ್ತದೆ. ಆದರೆ ಈ ಬಾರಿ ಮಾತ್ರ ಒಂದೂವರೆ ಗಂಟೆಗೆ ಬಜೆಟ್‌ ಮಂಡನೆ ಮುಗಿದುಹೋಗಿದೆ. ಈ ಬಗ್ಗೆ ಹಲವರಿಗೆ ಪ್ರಶ್ನೆ ಮೂಡಿದ್ದು, ಇದಕ್ಕೆ ಸಂಕ್ಷಿಪ್ತ ಉತ್ತರ ಇಲ್ಲಿದೆ..

ಈ ಹಿಂದಿನ ಎಲ್ಲಾ ಬಜೆಟ್ ಮಂಡನೆಗಿಂತ ಈ ಬಾರಿ ವಿಶೇಷ. ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಪಾರ್ಟ್ ಎ ಬದಲು ಪಾರ್ಟಿ ಬಿಗೆ ಹೆಚ್ಚಿನ ಒತ್ತು ನೀಡಲಿದ್ದಾರೆ. ಕಳೆದ 75 ವರ್ಷಗಳಿಂದ ಎಲ್ಲಾ ಹಣಕಾಸು ಸಚಿವರು ಸಂಪ್ರದಾಯದ ಪ್ರಕಾರ ಪಾರ್ಟ್ ಎ ಪ್ರತಿಯನ್ನು ಓದುತ್ತಿದ್ದರು. ಆದರೆ ಈ ಬಾರಿ ಭಿನ್ನವಾಗಿ ಪಾರ್ಟ್‌ ಬಿ ಓದಿದ್ದಾರೆ. ಪಾರ್ಟ್‌ ಎ ಓದಲು ನಿರ್ಧರಿಸಿದ್ದರೆ ಎರಡು-ಮೂರು ಗಂಟೆಗಳ ಸುದೀರ್ಘ ಬಜೆಟ್‌ ಎನ್ನಿಸುತ್ತಿತ್ತು. ಆದರೆ ಪಾರ್ಟ್‌ ಬಿ ಓದಲು ಆಯ್ಕೆ ಮಾಡಲಾಗಿದೆ.

ಕೇಂದ್ರ ಬಜೆಟ್ ಭಾಷಣದಲ್ಲಿ ಪಾರ್ಟ್ ಎ ಹಾಗೂ ಪಾರ್ಟಿ ಬಿ ಎಂದು ಎರಡು ವಿಭಾಗಗಳಿವೆ. ಪಾರ್ಟ್ ಎ ಭಾಗದಲ್ಲಿ ದೇಶದ ಆರ್ಥಿಕ ಸ್ಥಿತಿಗತಿ, ಯೋಜನೆಗಳು, ಅನುದಾನಗಳು, ನೀತಿ ಸೇರಿದಂತೆ ಹಲವು ಘೋಷಣೆಗಳು ಇರುತ್ತದೆ. ಪಾರ್ಟ್ ಬಿ ಬಜೆಟ್ ಪ್ರತಿಯಲ್ಲಿ ತೆರಿಗೆ ಪ್ರಸ್ತಾವನೆ ಸೇರಿದಂತೆ ಕೆಲ ಘೋಷಣೆಗಳಿಗೆ ಸೀಮಿತವಾಗಿರುತ್ತದೆ. ಈ ಬಾರಿ ನಿರ್ಮಾಲಾ ಸೀತಾರಾಮನ್ ಪಾರ್ಟಿ ಬಿ ಬಗ್ಗೆ ಗಮನ ಹರಿಸಿ ಅದನ್ನು ಓದಿದ್ದಾರೆ. ಅದಕ್ಕಾಗಿಯೇ ಭಾಷಣ ಚಿಕ್ಕ ಹಾಗೂ ಚೊಕ್ಕವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !