ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಸಾಲಿನ ಕೇಂದ್ರ ಬಜೆಟ್ ಮಂಡನೆ ಮುಕ್ತಾಯವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮುಗಿಸಿದ್ದು, ಈ ಬಗ್ಗೆ ರೈತರೊಬ್ಬರು ಮಾತನಾಡಿದ್ದಾರೆ.
ನಮಗೆ ಈ ಬಜೆಟ್ ತುಂಬಾನೇ ಇಷ್ಟ ಆಯ್ತು. ಪ್ರತೀ ಬಜೆಟ್‌ಲ್ಲೂ ನಾವು ಪ್ರಧಾನಿ ಮೋದಿ ಅವರ ದೂರದೃಷ್ಟಿಯನ್ನು ನೋಡುತ್ತೇವೆ ಎಂದು ಅಮೃತಸರದ ಅಜ್ನಲಾದ ಸ್ಥಳೀಯರ ರೈತರೊಬ್ಬರು ಹೇಳಿದ್ದಾರೆ.
ಈ ಬಜೆಟ್‌ನಲ್ಲಿ ಯುವಕರಿಗೆ ಪ್ರಯೋಜನಗಳು ಸಿಕ್ಕಿವೆ. ವೈದ್ಯಕೀಯ ಸೇವೆಗಳು, ಕೃಷಿ ಬೆಳವಣಿಗೆ ಮತ್ತು ರೈತರಿಗೆ ಪರಿಹಾರವನ್ನು ನಾವು ಹುಡುಕುತ್ತಿದ್ದೆವು. ಎಲ್ಲದಕ್ಕೂ ಉತ್ತರ ಇದೀಗ ಸಿಕ್ಕಿದೆ. ಪ್ರಧಾನಿ ಮೋದಿಯವರ ದೂರದೃಷ್ಟಿ ಮತ್ತು ‘ವಿಕ್ಷಿತ್ ಭಾರತ್’ ಕಾರ್ಯಕ್ರಮದತ್ತ ಸರ್ಕಾರದ ಒತ್ತು ಈ ಕ್ರಮಗಳಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತದೆ ಎಂದಿದ್ದಾರೆ.



